ನಕಲಿ ವೈದ್ಯರನ್ನು ನಿಗ್ರಹ ಮಾಡಲು ಕಾರ್ಯಪಡೆ ರಚನೆ: ಕೆ.ಆರ್. ರಮೇಶ್‌ಕುಮಾರ್

Update: 2017-06-19 15:32 GMT

ಬೆಂಗಳೂರು, ಜೂ.19: ನಕಲಿ ವೈದ್ಯರನ್ನು ನಿಗ್ರಹ ಮಾಡುವ ಉದ್ದೇಶದಿಂದ ಮಂಡಳಿಯಿಂದ ಜಿಲ್ಲಾವಾರು ಕಾರ್ಯಪಡೆ (ಟಾಸ್ಕ್‌ಫೋರ್ಸ್) ರಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್‌ಕುಮಾರ್ ತಿಳಿಸಿದ್ದಾರೆ.
          
ಸೋಮವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಸಂಕನೂರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ನಕಲಿ ವೈದ್ಯರ ಮೇಲೆ ಮಂಡಳಿಗೆ ದೂರುಗಳು ಬಂದಲ್ಲಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಇದುವರೆಗೂ 2869 ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿದೆ. ನಕಲಿ ವೈದ್ಯರ ಪ್ರಥಮ ಅಪರಾಧಕ್ಕೆ 25 ಸಾವಿರ ರೂ. ಎರಡನೆ ಅಪರಾಧಕ್ಕೆ 2.5 ಲಕ್ಷ ರೂ ಮತ್ತು ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು ಅದರ ನಂತರದ ಅಪರಾಧಗಳಿಗೆ 5 ಲಕ್ಷ ಮತ್ತು 3 ವರ್ಷದ ಕಾರಾಗೃಹ ಶಿಕ್ಷೆ ವಿಧಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News