×
Ad

ಹೆಚ್ಚುವರಿ ಪಾವತಿಸಿದ 4.64 ಕೋಟಿ ರೂ.ವಾಪಸ್ ಪಡೆಯಲು ಸದನ ಸಮಿತಿ ಶಿಫಾರಸ್ಸು

Update: 2017-06-19 21:12 IST

ಬೆಂಗಳೂರು, ಜೂ. 19: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳ ಪೂರೈಕೆ ಬಾಲಾಜಿ ಫುಡ್ ಪ್ರೊಸೆಸ್ಸಿಂಗ್ ಇಂಡಸ್ಟ್ರೀಸ್‌ನಿಂದ ಸ್ವೀಕೃತಿಯಾಗದಿದ್ದರೂ, ಕಂಪೆನಿಗೆ ಅಧಿಕವಾಗಿ ಪಾವತಿಸಿರುವ 4.64 ಕೋಟಿ ರೂ.ಹಣವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ವಿಧಾನ ಮಂಡಲ ಸಾರ್ವಜನಿಕ ಉದ್ಯಮಗಳ ಸಮಿತಿ ಶಿಫಾರಸ್ಸು ಮಾಡಿದೆ.

ಅಂದಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಅಧಿಕಾರಿಗಳ ಪ್ರಾತ ಹಾಗೂ ಕರ್ತವ್ಯ ಲೋಪದ ಬಗ್ಗೆ ವಿವರವಾದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಬ್ಯಾಂಕಿನ ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.


ಸಮಿತಿ ಅಧ್ಯಕ್ಷ ಡಾ.ಎ.ಬಿ. ಮಾಲಕರೆಡ್ಡಿ ಸೋಮವಾರ ವಿಧಾನಸಭೆಯಲ್ಲಿ ವರದಿ ಮಂಡಿಸಿದ್ದು, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಮುನ್ನಚ್ಚರಿಕೆ ವಹಿಸಬೇಕು. ಬಾಲಾಜಿ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರೀಸ್‌ನ ಮಾಲಕರಾದ ಪ್ರಕಾಶ್ ಗೌರ ಪಾತ್ರವಿದೆ ಎಂದು ಸಮಿತಿ ಶಿಫಾರಸ್ಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News