×
Ad

ದರೋಡೆ ಪ್ರಕರಣ: ಆರು ಜನರ ಬಂಧನ

Update: 2017-06-20 19:54 IST

ಬೆಂಗಳೂರು, ಜೂ.20: ಮಾರಕಾಸ್ತ್ರಗಳಿಂದ ಬೆದರಿಸಿ ನಗದು, ಚಿನ್ನಾಭರಣ ದೋಚುತ್ತಿದ್ದ ಪ್ರಕರಣ ಸಂಬಂಧ ರೌಡಿ ಸರವಣ ಸೇರಿ ಆರು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರೌಡಿ ಸರವಣ, ಗೋವಿಂದರಾಜು, ಶಬರಿನಾಥ, ಕಾರ್ತಿಕ್, ರಘು ಮತ್ತು ಸುಂದರ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದರು.

ನಗರದ ಎಚ್‌ಎಸ್‌ಆರ್ ಲೇಔಟ್ ವ್ಯಾಪ್ತಿಯ ವಿನಾಯಕನಗರ ಗುಂಡುತೋಪು ಬಳಿಯ ಖಾಲಿ ಜಾಗದಲ್ಲಿ ಈ ಆರು ಮಂದಿ ದರೋಡೆಕೋರರು ಮಾರಕಾಸ್ತ್ರಗಳ ನ್ನಿಟ್ಟುಕೊಂಡು ಹಣವಂತರನ್ನು ಅಡ್ಡಗಟ್ಟಿ ನಗದು ಹಾಗೂ ಚಿನ್ನದ ಆಭರಣಗಳನ್ನು ದೋಚಲು ಸಜ್ಜಾಗಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಖಾಲಿ ಜಾಗದ ಮೇಲೆ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು, ದರೋಡೆ ಮುಂತಾದ ಪ್ರಕರಣಗಳು ದಾಖಲಾಗಿವೆ. ಈ ಬಗ್ಗೆ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News