ಜೂಜಾಟ: 13 ಜನರ ಬಂಧನ
Update: 2017-06-20 20:44 IST
ಬೆಂಗಳೂರು, ಜೂ.20: ಮನೆಯೊಂದರಲ್ಲಿ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟವಾಡುತ್ತಿದ್ದ ಆರೋಪದ ಮೇಲೆ 13 ಜನರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 94 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ನಗರದ ಪುಟ್ಟೇನಹಳ್ಳಿಯ ಮೋಹನ್, ಶ್ರೀನಿವಾಸ, ಪವನ್ ಕುಮಾರ್, ರಮೇಶ್ ಬಾಬು, ವಿಜಯಕುಮಾರ್, ನವೀನ್ ಕುಮಾರ್, ಫಾರೂಖ್ ಸೇರಿ 13 ಜನ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಪುಟ್ಟೇನಹಳ್ಳಿ ಮುಖ್ಯರಸ್ತೆಯ ದೊರೆಬಂಗಲ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಜೂಜಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿ, ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.