ಮೃತಪಟ್ಟ ಕುಟುಂಬದವರಿಗೆ ತಲಾ 75 ಸಾವಿರ ರೂ.ಪರಿಹಾರ: ಎಚ್.ಕೆ.ಪಾಟೀಲ್
Update: 2017-06-20 21:00 IST
ಬೆಂಗಳೂರು, ಜೂ.20: ನರೇಗಾ ಯೋಜನೆ ಅಡಿಯಲ್ಲಿ ರಾಯಚೂರು ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಕೆಲಸಕ್ಕೆ ಹೋದಾಗ ಟ್ರಾಕ್ಟರ್ ಪಲ್ಟಿ ಹೊಡೆದು ಸಾವನ್ನಪ್ಪಿದ ಕುಟುಂಬದವರಿಗೆ ತಲಾ 75 ಸಾವಿರ ರೂ.ಪರಿಹಾರ ನೀಡಲಾಗುವುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ನಿಯಮ 68ರ ಅಡಿಯಲ್ಲಿ ಮಹತ್ವದ ಚರ್ಚೆ ನಡೆದಾಗ ಬಿಜೆಪಿ ಸದಸ್ಯ ಸೋಮಣ್ಣ ಬೇವಿನಮರದ ಅವರು ನರೇಗಾ ಯೋಜನೆಯಡಿಯಲ್ಲಿ ಕೆಲಸಕ್ಕೆ ಹೋದಾಗ ಟ್ರಾಕ್ಟರ್ ಪಲ್ಟಿ ಹೊಡೆದು ಕೆಲಸಗಾರರು ಮೃತಪಟ್ಟಿದ್ದಾರಲ್ಲ ಅವರಿಗೆ ಯಾವಾಗ ಪರಿಹಾರ ನೀಡುತ್ತೀರಿ ಹಾಗೂ ಎಷ್ಟು ನೀಡುತ್ತೀರಿ ಎಂದು ಪ್ರಶ್ನಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಸಚಿವರು ಈಗಾಗಲೇ ಮೃತರ ಕುಟುಂಬದವರಿಗೆ ತಲಾ 25 ಸಾವಿರ ರೂ.ಪರಿಹಾರ ನೀಡಲಾಗಿದ್ದು, ಉಳಿದ ಪರಿಹಾರವನ್ನು ಶೀಘ್ರದಲ್ಲಿಯೇ ನೀಡಲಾಗುವುದು ಎಂದು ಭರವಸೆ ನೀಡಿದರು.