ಸೌದಿಯಲ್ಲಿ ಭಾರತೀಯರು ಕುಟುಂಬ ಸಮೇತರಾಗಿ ನೆಲೆಸುವುದು ಇನ್ನು ಸುಲಭವಲ್ಲ: ಕಾರಣವೇನು ಗೊತ್ತೇ?

Update: 2017-06-21 05:22 GMT

ಹೊಸದಿಲ್ಲಿ, ಜೂ.21: ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಅಲ್ಲೇ ಕುಟುಂಬದ ಜೊತೆಗೆ ವಾಸಿಸುತ್ತಿರುವ ಭಾರತೀಯರು ಸಂಕಷ್ಟಕ್ಕೀಡಾಗಿದ್ದಾರೆ. ಜುಲೈ 1ರಿಂದ ಸೌದಿ ಅರೇಬಿಯಾ “ಕೌಟುಂಬಿಕ ತೆರಿಗೆ”ಯನ್ನು ವಿಧಿಸುತ್ತಿದ್ದು, ಇದರಿಂದಾಗಿ ತಮ್ಮ ಜೊತೆಗಿರುವವರನ್ನು ಸೌದಿಯಲ್ಲಿರುವ ಭಾರತೀಯರು ತಾಯ್ನಾಡಿಗೆ  ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಪ್ರತಿಯೊಬ್ಬರಿಗೆ ತಿಂಗಳಿಗೆ 100 ರಿಯಾಲ್ ತೆರಿಗೆಯನ್ನು ಸೌದಿ ಸರಕಾರ ವಿಧಿಸಿದ್ದು, ಅಲ್ಲಿರುವ ಭಾರತೀಯರಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಸೌದಿ ಅರೇಬಿಯಾದಲ್ಲಿ ಸುಮಾರು 41 ಲಕ್ಷ ಭಾರತೀಯರಿದ್ದಾರೆ.

“ಆರ್ಥಿಕ ಹೊರೆಯಾಗುವುದರಿಂದ ಕೆಲವು ಕುಟುಂಬಗಳು ಭಾರತಕ್ಕೆ ಮರಳುವ ಯೋಜನೆ ಹಾಕಿಕೊಂಡಿದೆ” ಎಂದು ಕಂಪ್ಯೂಟರ್ ಉದ್ಯೋಗಿ ಮುಹಮ್ಮದ್ ತಾಹಿರ್ ಹೇಳಿದ್ದಾರೆ.

ಕಳೆದ ನಾಲ್ಕು ತಿಂಗಳುಗಳಿಂದ ಹಲವು ಕುಟುಂಬಗಳನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ವಲಸಿಗರ ಹಕ್ಕುಗಳ ಕಾರ್ಯಕರ್ತ ಭೀಮ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News