ಪಡಿತರ ಚೀಟಿದಾರರಿಗೆ ವಿವಿಧ ಯೋಜನೆಗಳು

Update: 2017-06-22 17:16 GMT

ಬೆಂಗಳೂರು, ಜೂ. 22: ಸಹಕಾರ ಯೋಜನೆ ವತಿಯಿಂದ ಪಡಿತರ ಚೀಟಿದಾರರಿಗೆ ನೀಡುವ ಸೇವೆಗಳನ್ನು ಎಲ್ಲ ಮಾದರಿಯ ಪಡಿತರ ಚೀಟಿದಾರರಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದ್ದಾರೆ.

ಸಹಕಾರ ಯೋಜನೆಯಡಿಯಲ್ಲಿ ಎಲ್ಲ ಮಾದರಿಯ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಅವರ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಂದ ಯಾವ ದಿನಾಂಕದಲ್ಲಿ ಯಾವ ಆಹಾರ ಸರಕುಗಳು ಎಷ್ಟು ಪ್ರಮಾಣದಲ್ಲಿ ನೀಡಲಾಗುತ್ತದೆ ಎಂಬ ಮಾಹಿತಿ ದೂರವಾಣಿಯ ಮೂಲಕ ಮತ್ತು ಪ್ರತಿನಿಧಿಗಳ ಮೂಲಕ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪಡಿತರ ಚೀಟಿದಾರರಿಗೆ ಕೇಂದ್ರ ಸರಕಾರ, ರಾಜ್ಯ ಸರಕಾರದ ಸವಲತ್ತುಗಳ ಜೊತೆಗೆ ಸರಕಾರೇತರ ಸಂಸ್ಥೆಗಳಿಂದ ನೀಡುವ ಶಿಕ್ಷಣ, ಉದ್ಯೋಗ, ಸಾಲ ಸೌಲಭ್ಯ, ಆರೋಗ್ಯ, ಕಾನೂನು ಪಡಿತರ ಚೀಟಿಯಲ್ಲಿ ಗುರುತಿಸಿರುವ ಸದಸ್ಯರಿಗೆ ಸ್ವ ಉದ್ಯೋಗ ತರಬೇತಿಯನ್ನು ನೀಡಲಾಗುತ್ತದೆ ಹಾಗೂ ಈಗಾಗಲೇ ಇತರೆ ಉದ್ದಿಮೆಗಳನ್ನು ನಡೆಸುತ್ತಿದ್ದರೆ ವಿವಿದ್ಧೋದ್ದೇಶಗಳಿಗೆ ನೀಡುವ ಸಾಲ ಸೌಲಭ್ಯದ ಬಗ್ಗೆ ಮಾಹಿತಿಯನ್ನು ನೀಡಿ ನೆರವನ್ನು ನೀಡುವುದರ ಜೊತೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಕಿಮ್ಮನೆ ರತ್ನಕಾರ್ ತಿಳಿಸಿದ್ದಾರೆ.

ಪಡಿತರ ಚೀಟಿಯಲ್ಲಿ ಗುರುತಿಸಿರುವ ಸದಸ್ಯರಿಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ನೇಮಕಾತಿ ಪರೀಕ್ಷೆಗಳ ಅಧಿಸೂಚನೆಯ ಮಾಹಿತಿಯನ್ನು ನೀಡಿ ಅಶಕ್ತ ಅಭ್ಯರ್ಥಿಗಳಿಗೆ ಆನ್‌ಲೈನ್ ಮತ್ತು ಪೋಸ್ಟಲ್ ಮೂಲಕ ಉತ್ತಮ ತರಬೇತಿಗಳನ್ನು ನೀಡಿ ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಪಡಿತರ ಚೀಟಿಯಲ್ಲಿ ಗುರುತಿಸಿರುವ ಮಕ್ಕಳಿಗೆ ಪ್ರವೇಶ ಪರೀಕ್ಷೆ, ಪಬ್ಲಿಕ್ ಪರೀಕ್ಷೆ, ಮೊರಾರ್ಜಿ ದೇಸಾಯಿ, ನವೋದಯ ವಸತಿ ಶಾಲೆ ಪರೀಕ್ಷೆಗಳಿಗೆ ಆನ್‌ಲೈನ್ ಮತ್ತು ಪೋಸ್ಟಲ್ ಮೂಲಕ ಉತ್ತಮ ತರಬೇತಿಗಳನ್ನು ನೀಡಿ ಸ್ಟಡಿ ಮೆಟಿರಿಯಲ್ಸ್‌ಗಳನ್ನು ಒದಗಿಸಲಾಗುತ್ತದೆ.

ಪ್ರತಿದಿನ ಶಿಕ್ಷಣ, ಕಾನೂನು, ಆರೋಗ್ಯ, ಉದ್ಯೋಗ ಇತರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸೂಕ್ತ ತಜ್ಞರ ಜೊತೆ ಸಮಾಲೋಚಿಸಲು ಅವಕಾಶವಿರುತ್ತದೆ ಎಂದು ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

ಸಹಕಾರ ಯೋಜನೆಯಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರ ಎಲ್ಲ್ಲ ಇಲಾಖೆಗಳ ಪ್ರತಿದಿನದ ಕಾರ್ಯಕ್ರಮಗಳ ವಿವರಗಳು, ಪ್ರಮುಖ ಪ್ರಕಟಣೆಗಳು ಮತ್ತು ಯೋಜನೆಗಳ ಮಾಹಿತಿಯನ್ನು ನೀಡಿ ಸಹಕಾರ ಯೋಜನೆ ಗುರುತಿನ ಚೀಟಿ ಹೊಂದಿರುವ ಪಡಿತರ ಚೀಟಿದಾರರಿಗೆ ಯೋಜನೆಗಳು ಅನ್ವಯಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎಲ್ಲ  ಮಾದರಿಯ ಪಡಿತರ ಚೀಟಿದಾರರು ಆರ್ಥಿಕ, ಶೈಕ್ಷಣಿಕ, ಕಾನೂನು, ಆರೋಗ್ಯ, ಉದ್ಯೋಗ ಇತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ನೆರವಾಗುವುದು ಸಹಕಾರ ಯೋಜನೆಯ ಕಾರ್ಯಕ್ರಮವಾಗಿದೆ. ಹೆಚ್ಚಿನ ಮಾಹಿತಿಯನ್ನು ಸಹಕಾರ ಯೋಜನೆ ಮಾಹಿತಿ ದೂರವಾಣಿ ಸಂಖ್ಯೆ 8880099290, ಇ-ಮೇಲ್ sahakarayojkar@gmail.com ನಿಂದ ಪಡೆಯಬಹುದು ಎಂದು ಕಿಮ್ಮನೆ ರತ್ನಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News