ಮಾದಕ ವಸ್ತು ಮಾರಾಟ: ಆರೋಪಿಗಳ ಬಂಧನ

Update: 2017-06-22 17:19 GMT

ಬೆಂಗಳೂರು, ಜೂ. 22: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ವಿದೇಶಿಯರನ್ನು ಸಿಸಿಬಿ ಪೊಲೀಸರು ಬಂಧಿಸಿ, 2.5 ಲಕ್ಷ ರೂ. ವೌಲ್ಯದ ಕೊಕೇನ್ ವಶಕ್ಕೆ ಪಡೆಯಲಾಗಿದೆ.

ನೈಜೀರಿಯಾದ ಪೀಟರ್ ವೊಪೊಜ್ (32), ಚಿನೆಡುಜಿ (32), ಫ್ಲೈಡ್ಲೈಸ್ ಎಜ್ (36), ನಾನ್ಸ್ ಜಾಕ್ಚಿನ್ (33), ವೆಲೆಂಟೇನ್ ಚಿಂಡು (28) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ರಾಮಮೂರ್ತಿ ನಗರ ಸಮೀಪದ ಚನ್ನಸಂದ್ರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಅವರು, ಕೊಕೇನ್ ಮಾದಕ ವಸ್ತುವನ್ನು ಬೇರೆಡೆ ತಂದು ನಗರದ ವಿವಿಧೆಡೆ ಸಂಚರಿಸಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳಿಂದ 6.4 ಗ್ರಾಂ ಕೊಕೇನ್, 8 ಗ್ರಾಂ ಕೆಟಮೇನ್, 3 ಪಾಸ್‌ಪೋರ್ಟ್, 14 ಮೊಬೈಲ್‌ಗಳು, ಮೂರು ಬೈಕ್‌ಗಳು ಸೇರಿ 2.5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News