ದ್ವಿತೀಯ ಪಿಯುಸಿ ಪ್ರವೇಶ ದಿನಾಂಕ ವಿಸ್ತರಣೆ

Update: 2017-06-22 17:39 GMT

ಬೆಂಗಳೂರು, ಜೂ. 22: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ದಾಖಲಾತಿ ದಿನಾಂಕವನ್ನು ಜು.21 ರವರೆಗೆ ವಿಸ್ತರಣೆ ಮಾಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.


 ಬಹಳಷ್ಟು ವಿದ್ಯಾರ್ಥಿಗಳು ಸಕಾಲದಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗದಿದ್ದರಿಂದ ಪ್ರವೇಶ ಪಡೆಯುವ ದಿನಾಂಕವನ್ನು ಮುಂದೂಡಲಾಗಿದೆ. ಅದರಂತೆ ದಂಡ ಶುಲ್ಕವಿಲ್ಲದೆ ಜೂ.30 ರವರೆಗೆ, 500 ರೂ.ಗಳ ದಂಡ ಶುಲ್ಕದೊಂದಿಗೆ ಜು.1 ರಿಂದ 10 ರವರೆಗೆ ಹಾಗೂ ವಿಶೇಷ ದಂಡ ಶುಲ್ಕ 2148 ರೂ.ಗಳೊಂದಿಗೆ ಜು.11 ರಿಂದ 21 ರೊಳಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ ಎಂದು ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಸೂಚಿತ ದಿನಾಂಕಗಳಲ್ಲಿ ದಾ
ಖಲಾಗುವ ವಿದ್ಯಾರ್ಥಿಗಳು ವಾರ್ಷಿಕ ಶೇ.75 ರಷ್ಟು ಹಾಜರಾತಿ ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News