ದೊಂಬರಾಟ ಪದ ಬಳಕೆ ಖಂಡಿಸಿ ಧರಣಿ

Update: 2017-06-23 12:38 GMT

ಬೆಂಗಳೂರು, ಜೂ.23: ದೊಂಬರಾಟ ಪದವನ್ನು ವ್ಯಂಗ್ಯವಾಗಿ, ಬೈಗುಳವಾಗಿ ಬಳಕೆ ಮಾಡುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ದೊಂಬರ ಹಿತವರ್ಧಕ ಸಂಘದ ಸದಸ್ಯರು ಇಂದು ನಗರದಲ್ಲಿ ಧರಣಿ ನಡೆಸಿದರು.

ನಗರದ ಪುರಭವನದ ಮುಂಭಾಗ ಹಮ್ಮಿಕೊಂಡಿದ್ದ ಧರಣಿಯ ನೇತೃತ್ವ ವಹಿಸಿದ್ದ ಸಂಘದ ಉಪಾಧ್ಯಕ್ಷ ಡಾ.ಟಿ.ಎಸ್.ಚಂದ್ರಕಾಂತ್ ಮಾತನಾಡಿ, ದೊಂಬರಾಟ ಎಂಬುವುದು ಸಮುದಾಯವನ್ನು ನಿರ್ಧರಿಸುವಂತದ್ದು, ಆದರೆ ಈ ಪದವನ್ನು ರಾಜಕೀಯ ಟೀಕೆ ಟಿಪ್ಪಣಿಗಳಿಗೆ ಬಳಕೆ ಮಾಡುತ್ತಿರುವುದು ಖಂಡನೀಯ ಎಂದರು.

ದೊಂಬರಾಟ ಆಡು ಪದ ಬಳಕೆಗೆ ನಮ್ಮದೇನು ಆಕ್ರೋಶವಿಲ್ಲ. ಈ ಪದವನ್ನು ವ್ಯಂಗ್ಯವಾಗಿ ಬಳಕೆ ಮಾಡಬಾರದು ಎಂಬುವುದು ನಿವೇದನೆ ಅಷ್ಟೇ. ದೊಂಬರಾಟ ಪದವನ್ನು ವ್ಯಂಗ್ಯ, ಬೈಗುಳ, ಕುಹಕುಗಳಿಗೆ ಬಳಕೆ ಮಾಡುತ್ತಿರುವದರಿಂದ ದೊಂಬರ ಸಮುದಾಯಕ್ಕೆ ಅವಮಾನವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತಿಸೂಚಿತ ದೊಂಬರಾಟ ಪದ ಬಳಕೆಗೆ ನಿಷೇಧ ಹೇರಬೇಕು. ಇದಕ್ಕಾಗಿ ಕಾನೂನನ್ನು ರೂಪಿಸಬೇಕು. ಜಾತಿಸೂಚಿತ ಪದವನ್ನು ವ್ಯಂಗ್ಯವಾಗಿ ಬಳಕೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸರಕಾರಕ್ಕೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ, ದಲಿತ ಸಂಘಟನೆಯ ಬಿ.ಗೋಪಾಲ್ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News