×
Ad

ಹಸನ್ ಮುಸ್ಲಿಯಾರ್

Update: 2017-06-24 13:21 IST

ಮೂಡುಬಿದಿರೆ, ಜೂ.24: ಇಲ್ಲಿಗೆ ಸಮೀಪದ  ವಾಲ್ಪಾಡಿ, ಪೆರಾಡಿ ಮುಂತಾದ ಹಲವೆಡೆ ಸುದೀರ್ಘ ಕಾಲ ಖತೀಬರಾಗಿ ಸೇವೆ ಸಲ್ಲಿಸಿದ್ದ, ಮೂಡುಬಿದಿರೆ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಮಾಜಿ ಅಧ್ಯಕ್ಷ ಹಸನ್ ಮುಸ್ಲಿಯಾರ್(62) ಶುಕ್ರವಾರ ಸಂಜೆ 6 ಗಂಟೆಗೆ  ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಕಳೆದ 4 ತಿಂಗಳಿನಿಂದ ಅನಾರೋಗ್ಯಕ್ಕೀಡಾಗಿದ್ದ ಹಸನ್ ಮುಸ್ಲಿಯಾರ್ ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಶಿಷ್ಯ ವೃಂದ ಹಾಗೂ  ಬಂಧು-ಬಳಗದವರನ್ನು ಅಗಲಿದ್ದಾರೆ.

ಮೃತರ ದಫನ ಕಾರ್ಯವು ಶುಕ್ರವಾರ ರಾತ್ರಿ ಮೂಡುಬಿದಿರೆಯ ಬದ್ರಿಯಾ ಟೌನ್ ಜುಮಾ ಮಸೀದಿಯ ಧಫನ ಭೂಮಿಯಲ್ಲಿ ನೆರವೇರಿತು.

ಸಂತಾಪ: ಉಸ್ತಾದರ ಅಕಾಲಿಕ ನಿಧನಕ್ಕೆ ಆತ್ರಾಡಿ ಖಾಝಿ ಶೈಖುನಾ ಅಲ್-ಹಾಜ್ ವಿ.ಕೆ.ಅಬೂಬಕರ್ ಮುಸ್ಲಿಯಾರ್, ಮೂಡುಬಿದಿರೆ ಬದ್ರಿಯಾ ಟೌನ್ ಜುಮಾ ಮಸೀದಿಯ ಖತೀಬ್ ಮುಸ್ತಫಾ ಯಮಾನಿ, ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಶಬೀರ್ ಅಹ್ಮದ್, ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಸ್ಸಲಾಂ ಯಮಾನಿ, ಕಾರ್ಯದರ್ಶಿ ಮುಹಮ್ಮದ್ ರಫೀಖ್ ದಾರಿಮಿ  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News