ವಿದ್ಯಾರ್ಥಿನಿಯ ಕೈ ಹಿಡಿದು ಎಳೆದಾಟ: ರೌಡಿಶೀಟರ್ ಬಂಧನ

Update: 2017-06-27 13:39 GMT

ಬೆಂಗಳೂರು, ಜೂ.27: ವಿದ್ಯಾರ್ಥಿನಿಯ ಕೈ ಹಿಡಿದು ಎಳೆದಾಡಿದ ಆರೋಪದ ಮೇಲೆ ರೌಡಿಶೀಟರ್‌ನನ್ನು ಇಲ್ಲಿನ ಮಹದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ನಿವಾಸಿ ಕುಮಾರ್ ಎಂಬಾತ ಬಂಧಿತ ರೌಡಿಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್‌ನಲ್ಲಿ ಬಂದಿದ್ದ ರೌಡಿಶೀಟರ್ ಕುಮಾರ್, ಪ್ರೀತಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಯ ಮೈ-ಕೈ ಮುಟ್ಟಿ ಕೈ ಹಿಡಿದು ಎಳೆದಾಡಿದ್ದ ಎನ್ನಲಾಗಿದೆ.ಬಳಿಕ ವಿದ್ಯಾರ್ಥಿನಿ ಬೈಕ್ ನಂಬರ್ ಬರೆದುಕೊಂಡು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಳು. ಬೈಕ್ ನಂಬರ್ ಆಧರಿಸಿ ರೌಡಿಶೀಟರ್ ಕುಮಾರ್‌ನನ್ನು ಮಹದೇವಪುರ ಪೊಲೀಸರು ಸೆರೆಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News