ಅಕ್ರಮ ಚಟುವಟಿಕೆ ವಿರುದ್ಧ ಸೂಕ್ತ ಕ್ರಮ

Update: 2017-06-28 13:14 GMT

ಬೆಂಗಳೂರು, ಜೂ.28: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿ ಸಾಕಷ್ಟು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಕಾರಾಗೃಹ ಇಲಾಖೆ ಡಿಐಜಿ ರೂಪಾ ಡಿ ಮೌದ್ಗಿಲ್ ಇಂದಿಲ್ಲಿ ತಿಳಿಸಿದ್ದಾರೆ.

ಬುಧವಾರ ನಗರದ ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ಮಾತನಾಡಿ, ರೂಪಾಂತರ ಎಂಬ ನೂತನ ಕಾರ್ಯಕ್ರಮವನ್ನು ಕೆಲ ಎನ್‌ಜಿಓ ಸಂಸ್ಥೆಯೊಂದಿಗೆ ಮಾಡಲಾಗುತ್ತದೆ. ಬಂಧಿತ ಆರೋಪಿಗಳ ಮನಃ ಪರಿವರ್ತನೆ ಮಾಡುವುದು ರೂಪಾಂತರ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಕೆಲ ಕೈದಿಗಳು ಒಂದು ಕ್ಷಣದ ಕೋಪಕ್ಕೊಳಗಾಗಿ ಕೊಲೆ ಮಾಡಿ ಜೈಲು ಸೇರಿರುತ್ತಾರೆ. ಆದರೆ, ನಂತರ ತಾವು ಮಾಡಿದ ಕಾರ್ಯದ ಬಗ್ಗೆ ಪಶ್ಚಾತ್ತಾಪ ಪಡುತ್ತಾರೆ. ಇಂತಹವರಿಗೆ ಹೊಸ ಜೀವನವನ್ನು ನೀಡುವ ಉದ್ದೇಶದಿಂದ ರೂಪಾಂತರ ಹೆಸರಿನ ಹೊಸ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News