×
Ad

ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ

Update: 2017-06-29 20:17 IST

ಬೆಂಗಳೂರು, ಜೂ.29: ರಾಜ್ಯ ಸರಕಾರವು 13 ಮಂದಿ ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಆದೇಶ ಹೊರಡಿಸಿದೆ.

ಬಿ.ಎಂ.ಪರಮೇಶ್ವರ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಬಜೆಟ್ ಮತ್ತು ಲೆಕ್ಕಪರಿಶೋಧನೆ), ಕೆ.ಬಿ.ಮಾರ್ಕಂಡೇಯ-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಕೇಂದ್ರ ಕಚೇರಿ), ವಿ.ಗೀತಾಂಜಲಿ-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಕಲಬುರಗಿ ವೃತ್ತ)ಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ಮನೋಜ್‌ಕುಮಾರ್-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಆನೆ ಯೋಜನೆ), ಎಸ್.ಎಸ್.ಲಿಂಗರಾಜು-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಕೊಡಗು ವೃತ್ತ), ಡಾ.ಪಿ.ಶಂಕರ-ಅರಣ್ಯ ಉಪ ಸಂರಕ್ಷಣಾಧಿಕಾರಿ ಹಾಗೂ ಚಾಮರಾಜನಗರ ಬಿಆರ್‌ಟಿ ಹುಲಿ ಸಂರಕ್ಷಣಾ ಯೋಜನೆಯ ಉಪ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಡಾ.ಕೆ.ಟಿ.ಹನುಮಂತಪ್ಪ-ಮೈಸೂರು ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ, ವಸಂತ ರೆಡ್ಡಿ-ಮೈಸೂರಿನ ಚಾಮರಾಜೇಂದ್ರ ಮೃಗಾಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.

ಡಾ.ಕರಿಕಾಲನ್-ಮಂಗಳೂರು ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ, ಕೆ.ಕಮಲಾ-ಮಂಗಳೂರಿನ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ(ರಬ್ಬರ್)ದ ಅರಣ್ಯ ಉಪ ಸಂರಕ್ಷಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ, ಡಿ.ಮಹೇಶ್‌ಕುಮಾರ್-ಧಾರವಾಡ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ದೀಪ್ ಜೆ.ಕಂಟ್ರಾಕ್ಟರ್-ಧಾರವಾಡ ಜಿಲ್ಲೆಯ ಗಂಗರಾಗಹಟ್ಟಿಯ ರಾಜ್ಯ ಅರಣ್ಯ ಅಕಾಡಮಿಯ ಜಂಟಿ ನಿರ್ದೇಶಕ ಹಾಗೂ ಅರಣ್ಯ ಉಪ ಸಂರಕ್ಷಣಾಧಿಕಾರಿ, ಎಂ.ಎಂ.ವಾನತಿ-ಕಲಬುರಗಿ ಜಿಲ್ಲೆಯ ಹೈದರಾಬಾದ್-ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಹಾಗೂ ಅರಣ್ಯ ಉಪ ಸಂರಕ್ಷಣಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News