ಜಿಎಸ್ಟಿ ಜಾರಿಗೆ ಸಂಭ್ರಮಾಚರಣೆ ಅಗತ್ಯವೇ: ಡಾ.ಜಿ.ಪರಮೇಶ್ವರ್ ಪ್ರಶ್ನೆ
Update: 2017-06-30 20:33 IST
ಬೆಂಗಳೂರು, ಜೂ. 30: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಗೆ ನಮ್ಮ ವಿರೋಧವಿಲ್ಲ. ಆದರೆ, ಹೊಸ ತೆರಿಗೆ ಪದ್ಧತಿಯನ್ನು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಮಧ್ಯರಾತ್ರಿ ಕಾರ್ಯಕ್ರಮ ಆಯೋಜಿಸುವ ಮೂಲಕ ಅದರ ಪಾವಿತ್ರತೆಗೆ ಪ್ರಧಾನಿ ಮೋದಿ ಧಕ್ಕೆಯನ್ನು ಉಂಟು ಮಾಡಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ.
ಒಂದು ತೆರಿಗೆ ಪದ್ಧತಿ ಜಾರಿಗೊಳಿಸುವ ವ್ಯವಸ್ಥೆ ಇದಕ್ಕೆ ಸಂಭ್ರಮಾಚರಣೆಯಲ್ಲಿ ವಿಶೇಷತೆ ಏನಿದೆ. ರಾಜಕೀಯ ಪ್ರಚಾರದ ಲಾಭಕ್ಕೋಸ್ಕರ ದೇಶದ ಸಂಭ್ರಮ ಎನ್ನುವಂತೆ ಬಿಂಬಿಸುವುದು ದುರಾದೃಷ್ಟಕರ ಸಂಗತಿ. ಈ ವ್ಯವಸ್ಥೆ ವಸ್ತುವಿನ ಕಡಿಮೆ ತೆರಿಗೆ ಮತ್ತು ಕೆಲವು ವಸ್ತುವಿನ ಮೇಲೆ ಹೆಚ್ಚು ತೆರಿಗೆ ಉಂಟಾಗುತ್ತಿದೆ. ಆದರೆ, ತೆರಿಗೆ ಮುಕ್ತಿ ಸಿಗುತ್ತಿಲ್ಲ. ಹೀಗಿರುವಾಗ ಮತ್ತೇಕೆ ಸಂಭ್ರಮಾಚರಣೆ ಎಂದು ಪರಮೇಶ್ವರ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.