×
Ad

'800 ಕೋಟಿ ವೆಚ್ಚದಲ್ಲಿ ರಾಗಿಗುಡ್ಡ ದೇವಸ್ಥಾನದಿಂದ ಸಿಲ್ಕ್ ಬೋರ್ಡ್ ವರೆಗೆ ಮೇಲ್ಸೇತುವೆ

Update: 2017-06-30 21:42 IST

ಬೆಂಗಳೂರು, ಜೂ.30: ಜಯನಗರದ 9ನೆ ಬ್ಲಾಕ್ನಲ್ಲಿರುವ ರಾಗಿಗುಡ್ಡ ದೇವಸ್ಥಾನದಿಂದ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ 800 ಕೋಟಿ ರೂ.ವೆಚ್ಚದಲ್ಲಿ ಮೇಲ್ಸೆತುವೆ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲು ಬಿಬಿಎಂಪಿ ಹಾಗೂ ಬಿಎಂಆರ್ಸಿಎಲ್ ಸಹಮತ ವ್ಯಕ್ತಪಡಿಸಿವೆ.

ನಾಲ್ಕು ಪಥದ ಮೇಲ್ಸೆತುವೆಯೂ ಮೆಟ್ರೋ ರೈಲು ಮಾರ್ಗವನ್ನು ಒಳಗೊಂಡಿರುತ್ತದೆ. 2016-17ನೆ ಸಾಲಿನ ಬಜೆಟ್ನಲ್ಲಿ ಈ ಮೇಲ್ಸೆತುವೆ ನಿರ್ಮಾಣ ಯೋಜನೆಯನ್ನು ಘೋಷಿಸಲಾಗಿತ್ತು. ದಕ್ಷಿಣ ಬೆಂಗಳೂರಿನ ವರ್ತುಲ ರಸ್ತೆಯ ನಾಲ್ಕು ಕಿ.ಮೀ.ವಿಸ್ತೀರ್ಣದ ಎರಡು ಬದಿಯನ್ನು ಸಂಪರ್ಕಿಸುವ ಕಾಮಗಾರಿಗೆ ಅಂದಾಜು 330 ಕೋಟಿ ರೂ.ಖರ್ಚಾಗಲಿದೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಮೇಲ್ಸೆತುವೆ ನಿಮಾರ್ಣ ಕಾಮಗಾರಿಗೆ ಆರಂಭಿಕವಾಗಿ ಬಿಬಿಎಂಪಿ 100 ಕೋಟಿ ರೂ.ಗಳನ್ನು ಪಾವತಿಸಲಿದೆ. ಸಿಲ್ಕ್ಬೋರ್ಡ್ ಹಾಗೂ ಜಯದೇವ ಆಸ್ಪತ್ರೆ ಜಂಕ್ಷನ್ ಬಳಿಯಿರುವ ಹಳೆ ಮೇಲ್ಸೆತುವೆಯನ್ನು ಈ ಯೋಜನೆಗಾಗಿ ತೆರವು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈ ಎರಡು ಜಂಕ್ಷನ್ಗಳು ಮುಂಬರುವ ಮೆಟ್ರೊ ರೈಲ್ವೆ ನಿಲ್ದಾಣಗಳಿಗೆ ಸಹಕಾರಿಯಾಗಲಿವೆ ಎಂದರು.


ಆರ್.ವಿ.ರಸ್ತೆಯಿಂದ ಸಿಲ್ಕ್ಬೋರ್ಡ್ ವರೆಗಿನ 19 ಕಿ.ಮೀ ಮಾರ್ಗದ ಕಾಮಗಾರಿಯನ್ನು ಈಗಾಗಲೆ ಕೈಗೆತ್ತಿಕೊಳ್ಳಲಾಗಿದ್ದು, 27 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ರಸ್ತೆ ಹಾಗೂ ಮೇಲ್ಸೆತುವೆ ನಿರ್ಮಾಣಕ್ಕಾಗಿ 800 ಕೋಟಿ ರೂ.ಖರ್ಚಾಗಲಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ಸಿಂಗ್ ಖರೋಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News