ಒಟ್ಟು ಎಷ್ಟು ಬಾರಿ ಮಧ್ಯರಾತ್ರಿ ಸಂಸತ್ತಿನ ಅಧಿವೇಶನ ನಡೆದಿದೆ?: ಇಲ್ಲಿದೆ ಮಾಹಿತಿ

Update: 2017-07-01 09:49 GMT

ಹೊಸದಿಲ್ಲಿ, ಜು.1: ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಗೆ ಶುಕ್ರವಾರ ಮಧ್ಯರಾತ್ರಿ ನಡೆದ ಅಧಿವೇಶನ ಹೊಸ ಇತಿಹಾಸ ಬರೆದಿದೆ. ಆದರೆ ಇಂತಹ ಅಧಿವೇಶನ ನಡೆದದ್ದು ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಕೆಲ ಸಂದರ್ಭಗಳಲ್ಲಿ ಮಧ್ಯರಾತ್ರಿಯ ಅಧಿವೇಶನಗಳಿಗೆ ಸಂಸತ್ ಸಾಕ್ಷಿಯಾಗಿದೆ.

1947 ಆಗಸ್ಟ್ 14-15: ಭಾರತದ ಸ್ವಾತಂತ್ರ್ಯದ ಸಂದರ್ಭದಲ್ಲಿ ಅಂದರೆ 1947ರ ಆಗಸ್ಟ್ 14ರಂದು ರಾತ್ರಿ 11 ಗಂಟೆಗೆ ಇದೇ ರೀತಿಯ ಅಧಿವೇಶನ ಸಂಸತ್ ನಲ್ಲಿ ನಡೆದಿತ್ತು. 11 ಗಂಟೆಗೆ ಆರಂಭವಾದ ಅಧಿವೇಶನ ಮಧ್ಯರಾತ್ರಿಯ ನಂತರವೂ ಮುಂದುವರಿದಿತ್ತು.

1972 ಆಗಸ್ಟ್ 14-15: ಭಾರತದ ಸ್ವಾತಂತ್ರ್ಯದ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಸಂದರ್ಭವೂ ಮಧ್ಯರಾತ್ರಿ ಅಧಿವೇಶನ ನಡೆದಿತ್ತು.

1992 ಆಗಸ್ಟ್ 9: “ಕ್ವಿಟ್ ಇಂಡಿಯಾ ಚಳುವಳಿ”ಯ 50ನೆ ವರ್ಷಾಚರಣೆಯ ಹಿನ್ನೆಲೆಯಲ್ಲಿ ಇದೇ ರೀತಿಯ ಅಧಿವೇಶನ ನಡೆದಿತ್ತು.

1997 ಆಗಸ್ಟ್ 14-15: ದೇಶ ಸ್ವಾತಂತ್ರ್ಯಗೊಂಡು 50 ವರ್ಷಗಳು ಸಂದ ಹಿನ್ನೆಲೆಯಲ್ಲಿ 1997ರಲ್ಲೂ ಮಧ್ಯರಾತ್ರಿಯಲ್ಲಿ ಸಂಸತ್ ಅಧಿವೇಶನ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News