26 ವರ್ಷಗಳ ಹಿಂದೆ ಬಹರೈನ್ ಗೆ ಹೋಗಿ ವಾಪಸ್ಸಾಗದ ಪುತ್ರ

Update: 2017-07-01 09:54 GMT

 ನಾದಾಪುರಂ(ಕೇರಳ), ಜು.1: ಮರುಭೂಮಿಯಲ್ಲಿ ತನ್ನ ಮಗ ಬದುಕಿದ್ದಾನೆಎನ್ನುವ ನಿರೀಕ್ಷೆಯಲ್ಲಿ ಮುಪ್ಪಿನ ನಿಶ್ಶಕ್ತಿಯಲ್ಲಿಯೂ ಬಾಲನ್ ಜೀವನ ರಥ ಮುಂದೂಡುತ್ತಿದ್ದಾರೆ. ಕಳೆದ 26ವರ್ಷಗಳ ಹಿಂದೆ ಬಹರೈನ್ ಗೆ ಹೋದ ಕಣ್ಣೂರ್ ಪಾನೂರಿನ ಎಲಾಂಕ್ಕೋಟ್ಟ್ ವಟ್ಟಕಂಡಿಯ ಪ್ರಭಾಕರನ್‌ರ ತಂದೆಯ ಕಥೆಯಿದು.

1991ರಲ್ಲಿ ಪ್ರಭಾಕರನ್ ಬಹರೈನ್ ಗೆ ಹೋಗಿದ್ದರು. ವೀಸಾ ಬದಲಾಯಿಸಿ ದುಬೈಗೆ ಹೋಗುತ್ತಿದ್ದೇನೆ ಎಂದು ಬಾಂಬೆಗೆ ಬಂದು ಅಲ್ಲಿಂದಲೆ ದುಬೈಗೆ ಹೋಗುವುದೆಂದು ಪ್ರಭಾಕರನ್ ತಂದೆಗೆ ಪತ್ರ ಬರೆದಿದ್ದರು. 1999 ಫೆಬ್ರವರಿ ಐದರಂದು ಒಂದು ಪತ್ರ ಮತ್ತು ಮೂರುಸಾವಿರೂಪಾಯಿ ಪ್ರಭಾಕರನ್ ಕಳುಹಿಸಿದ್ದರು. ನಂತರ ಮಗನ ಕುರಿತು ಯಾವುದೇ ಸುಳಿವು ಇಲ್ಲ. ಮುಖ್ಯಮಂತ್ರಿಗಳಿಗೆ, ಸಂಸದರಿಗೆ, ಕೇಂದ್ರ-ರಾಜ್ಯದ ಸಚಿವರಿಗೆ,ಶಾಸಕರಿಗೆ ಮಗನನ್ನು ಹುಡುಕಿ ಕೊಡುವಂತೆ ಮನವಿಮಾಡಿದ್ದಾರೆ. ಆದರೆ ಬಾಲನ್‌ರ ಮಗನ ಕುರಿತು ಯಾವ ವಿವರವೂ ದೊರೆಯಲಿಲ್ಲ.

  ಪೊಲೀಸರು ತನಿಖೆ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ಇದರ ನಡುವೆ 13ವರ್ಷಗಳ ಹಿಂದೆ ಅಮ್ಮ ರಾಧಾ ಮೃತಪಟ್ಟರು. ಬಾಲನ್‌ರ ಐವರು ಪುತ್ರರಲ್ಲಿ ಪ್ರಭಾಕರನ್ ಹಿರಿಯ ಪುತ್ರನಾಗಿದ್ದರೆ. ಮೂವರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳು. ಅವರಲ್ಲಿ ಹಿರಿಯ ಮಗ ಪ್ರಭಾಕರನ್ ವಿದೇಶಕ್ಕೆ ಹೋಗಿ ಕಾಣೆಯಾಗಿದ್ದಾರೆ. ಬಂಗಾರದ ಆಭರಣದ ಕೆಲಸ ಮಾಡುತ್ತಿದ್ದ ಬಾಲನ್ ಆ ಕೆಲಸವನ್ನು ಬಿಟ್ಟು ಈಗ ಲಾಟರಿ ಮಾರುತ್ತಾ ಊರೂರು ಸುತ್ತಾಡುತ್ತಿದ್ದಾರೆ. ಬಾಲನ್‌ಗೆ ಈಗ ಎಂಬತ್ತೈದು ವರ್ಷ ವಯಸ್ಸಾಗಿದ್ದು, ತನ್ನ ಲಾಟರಿ ಚೀಲದಲ್ಲಿ ಮಗನ ಫೋಟೊವನ್ನು ಇರಿಸಿಕೊಂಡು ಆತನ ಬರುವಿಕೆಗಾಗಿ ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News