ಟಿಪ್ಪು ಸುಲ್ತಾನನ ರಾಜನೀತಿ

Update: 2017-07-01 16:33 GMT

ನಿಮ್ಮ ಪ್ರಗತಿಯೇ ರಾಷ್ಟ್ರದ ಪ್ರಗತಿ

ನಮ್ಮ ಆರ್ಥಿಕ ಮತ್ತು ವಾಣಿಜ್ಯ ನೀತಿಯು ಬೆಳವಣಿಗೆ ಮತ್ತು ಚಲನಶೀಲತೆಯನ್ನು ಆಧರಿಸಬೇಕು.

ನಮ್ಮ ಜನರ ಪ್ರತಿಭೆೆ ಮತ್ತು ಮಣ್ಣಿನ ಫಲವತ್ತತೆಗೆ ಅನುಗುಣವಾದ ವೈವಿಧ್ಯಮಯವಾದ ಹೊಚ್ಚ ಹೊಸ ಚಟುವಟಿಕೆಗಳ ಕಡೆ ನಮ್ಮ ಗಮನ ಹರಿಯಬೇಕು.

ಕೇವಲ ಸಾಂಪ್ರದಾಯಿಕ ವಸ್ತುಗಳನ್ನು ಉತ್ಪಾದಿಸುವ ವಿಧಾನಗಳನ್ನು ಸುಧಾರಿಸಿದರೆ ಸಾಲುವುದಿಲ್ಲ.

ಸುಧಾರಿತ ಉತ್ಪಾದನಾ ವಿಧಾನಗಳ ಮೂಲಕ ಉನ್ನತ ಗುಣಮಟ್ಟದ ಸಂಪನ್ಮೂಲಗಳ ಬಳಕೆಗೆ ಸರಕಾರದ ಸಂಪೂರ್ಣ ಸಹಕಾರವಿದೆ ಎಂಬ ಭರವಸೆ ನೀಡುತ್ತೇನೆ. ನಿಮ್ಮ ಪ್ರಗತಿಯೇ ರಾಷ್ಟ್ರದ ಪ್ರಗತಿ. ಸಾಮ್ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಉತ್ತಮ ಆದಾಯವುಳ್ಳ ಉಪಯುಕ್ತವಾದ ಉದ್ಯೋಗ ಪಡೆಯಲಿ. ಆಗ ಮಾತ್ರ ಸಾಮ್ರಾಜ್ಯ ತನ್ನ ಗುರಿ ಮುಟ್ಟುತ್ತದೆ.

(ಆಧಾರ -ವಿವಿಧ ಇಂಗ್ಲಿಷ್ ಮೂಲಗಳಿಂದ)

Writer - ಡಾ॥ ಲಕ್ಷ್ಮೀಪತಿ .ಸಿ.ಜಿ

contributor

Editor - ಡಾ॥ ಲಕ್ಷ್ಮೀಪತಿ .ಸಿ.ಜಿ

contributor

Similar News