ದೊಂಬರಾಟ ಮತ್ತು ಗುರುತ್ವ ಕೇಂದ್ರ

Update: 2017-07-01 17:20 GMT

ಒಂದು ಕಷ್ಟದ ಕೆಲಸವನ್ನು ಮಾಡುವುದನ್ನು ವಿವರಿಸುವಾಗ ಹಗ್ಗದ ಮೇಲೆ ನಡೆದಂತೆ ಎಂಬ ಉಪಮೆ ಬಳಸಲಾಗುತ್ತದೆ. ಹಗ್ಗದ ಮೇಲೆ ನಡೆಯುವುದು ಒಂದು ಕಲೆ. ಆದರೆ ಅದರ ಹಿಂದಿರುವ ವಿಜ್ಞಾನದ ನಿಯಮಗಳು ಹಾಗೆ ನಡೆಯುವವರ ಅರಿವಿಗೆ ಬಂದಿರುವ ಸಾಧ್ಯತೆಯೂ ಕಡಿಮೆ ಎಂದು ಹೇಳಬಹುದು. ದೊಂಬರಾಟದಲ್ಲಿ ಮುಖ್ಯವಾದ ಹಗ್ಗದ ಮೇಲೆ ನಡೆಯುವವರು ತಮಗರಿವಿಲ್ಲದೇ ಭೌತವಿಜ್ಞಾನದ ಗುರುತ್ವ ಕೇಂದ್ರ ನಿಯಮದ ಮಹತ್ವವನ್ನು ಕಂಡುಕೊಂಡಿದ್ದಾರೆ. ಇದಲ್ಲದೇ, ಯಾವುದೇ ಹಾರಾಡುವ ಅಂದರೆ ವಿಮಾನ, ಗಾಳಿಪಟ, ಗ್ಲೈಡರ್ ಇವೆಲ್ಲವೂ ಬೀಳದೆ ಹಾರಾಡುವುದಕ್ಕೆ ಮೂಲಕಾರಣ ಗುರುತ್ವ ಕೇಂದ್ರ ಅಥವಾ Centre of Gravity.ಗುರುತ್ವ ಕೇಂದ್ರವು ಯಾವುದೇ ಘನ ವಸ್ತುವಿನ ಭೌತಿಕ ಗುಣ, ವಸ್ತುವು ಬೀಳುತ್ತಿದ್ದರೆ, ಅದರ ಗುರುತ್ವ ಕೇಂದ್ರವು ಬೀಳುತ್ತಿರುವ ದಿಕ್ಕಿನಲ್ಲಿ ಚಲಿಸುತ್ತಿರುತ್ತದೆ. ಅದೇ ವಸ್ತುವು ತಿರುಗಲು ಅವಕಾಶವಿದ್ದರೆ ಅದು ಗುರುತ್ವಕೇಂದ್ರದ ಸುತ್ತ ತಿರುಗುತ್ತಿರುತ್ತದೆ. ಇದಕ್ಕೆ ನಾವು ಗಾಳಿಪಟದ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಚೌಕಾಕಾರವಾಗಿರುವ ಗಾಳಿಪಟದ ಎದುರು ಚೆದುರಿರುವ ಮೂಲೆಗಳನ್ನು ಜೋಡಿಸಿದರೆ, ಆ ಗೆರೆಗಳು ಚೌಕದ ನಡುವೆ ಒಂದು ಬಿಂದುವಿನಲ್ಲಿ ಸಂಧಿಸುತ್ತವೆ. ಅದೇ ಗಾಳಿಪಟದ ಗುರುತ್ವ ಕೇಂದ್ರ. ಆ ಬಿಂದುವಿನ ಮೂಲಕ ಗಾಳಿಪಟದ ಹಾರುವಿಕೆಯನ್ನು (ಚಿತ್ರ-1)

ತಿರುಗುವಿಕೆಯನ್ನು ನಿಯಂತ್ರಿಸಬಹುದು. ಅದೇ ರೀತಿ ವೃತ್ತಾಕಾರಕ್ಕೆ ಕೇಂದ್ರ ಬಿಂದುವಿನಲ್ಲಿ ಗುರುತ್ವ ಕೇಂದ್ರವಿರುತ್ತದೆ. ಬೇರೆ ಯಾವುದೇ ಆಕಾರವಿದ್ದರೂ, ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ, ಹಾಗೆಯೇ ಎಲ್ಲ ಮೂಲೆಗಳನ್ನು ಅದಕ್ಕೆ ಲಂಬವಾಗಿರುವ ಮೂಲೆಗಳನ್ನು ಸೇರಿಸುವಂತೆ ಗೆರೆ ಹಾಕಿದಾಗ ಸಂಧಿಸುವ ಬಿಂದುವಿನಲ್ಲಿ ಗುರುತ್ವ ಕೇಂದ್ರವಿರುತ್ತದೆ (ಚಿತ್ರ-2).

ಈಗ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಆಕಾರಗಳನ್ನು ಗಮನಿಸಿ ಮತ್ತು ಅದರ ಗುರುತ್ವ ಕೇಂದ್ರವನ್ನು ಊಹಿಸಿಕೊಳ್ಳಬಹುದು.

ಮೂಲತಃ ಗುರುತ್ವ ಕೇಂದ್ರದಲ್ಲಿ, ವಸ್ತುವಿನ ಸಂಪೂರ್ಣ ಭಾರ ಕೇಂದ್ರಿತವಾಗಿರುತ್ತದೆ. ಸಾಮರ್ಥ್ಯವಿದ್ದರೆ ಯಾವುದೇ ವಸ್ತುವಿನ ಗುರುತ್ವ ಕೇಂದ್ರವನ್ನು ಗುರುತಿಸಿ, ಆ ಬಿಂದುವಿನಿಂದ ಎಷ್ಟೇ ಭಾರವಿದ್ದರೂ, ಎತ್ತಬಹುದು. ಈ ನಿಯಮವನ್ನು ಭಾರವನ್ನು ಎತ್ತುವ ಜಟ್ಟಿಗಳಲ್ಲಿ ಸಮರ್ಪಕವಾಗಿ ಬಳಸುತ್ತಾರೆ. ಅವರು ಕೈಗಳನ್ನು ಅಗಲಿಸಿದಷ್ಟು ಭಾರವನ್ನು ಎತ್ತುವುದು ಸುಲಭವಾಗುತ್ತದೆ. ಈಗ ಇನ್ನೊಂದು ಉದಾಹರಣೆಯನ್ನು ಗಮನಿಸೋಣ. ನಿಂತಿರುವ ವ್ಯಕ್ತಿಯನ್ನು ಮತ್ತು ನೆಲದ ಮೇಲೆ ಕೂತಿರುವ ವ್ಯಕ್ತಿಯನ್ನು ದಾಡಿ ಬೀಳಿಸಲು ಯತ್ನ ಮಾಡಿದರೆ, ನಿಂತಿರುವ ವ್ಯಕ್ತಿಯನ್ನು ಬೀಳಿಸಲು ಕಡಿಮೆ ಶ್ರಮ ವ್ಯಯವಾಗುತ್ತದೆ.

 ಈಗ ಹಗ್ಗದ ಮೇಲೆ ನಡೆಯುವವರನ್ನು ಗಮನಿಸೋಣ. ಕೋಲುಗಳನ್ನು ಸೇರಿಸಿ ಎತ್ತರದಲ್ಲಿ ಕಟ್ಟಿರುವ ಹಗ್ಗದ ಮೇಲೆ ಗಾಳಿಯ ಒತ್ತಡವಿರುತ್ತದೆ. ಅಂದರೆ ಗಾಳಿ ಬೀಸಿದಂತೆ ಹಗ್ಗವೂ ತೂಗಾಡುವ ಸಾಧ್ಯತೆಯಿರುತ್ತದೆ. ಅದರ ಮೇಲೆ ನಡೆಯುವವರು ಉದ್ದವಾದ ಕೋಲುಗಳನ್ನು ಹಿಡಿದು ನಡೆಯುತ್ತಿರುತ್ತಾರೆ. ಕೋಲಿನ ಮೂಲಕ ಬಲಕ್ಕೆ, ಎಡಕ್ಕೆ ಬಾಗಿ ಗುರುತ್ವ ಕೇಂದ್ರವನ್ನು ನಿಯಂತ್ರಿಸುತ್ತಾರೆ. ಈ ನಿಯಂತ್ರಣದಿಂದ ಎಲ್ಲಾ ತಿರುಗುಬಲಗಳೂ (forgues) ವಿರುದ್ಧ ದಿಕ್ಕಿನಲ್ಲಿರುವ ಕಾರಣ, ಒಟ್ಟು ಬಲ ಶೂನ್ಯವಾಗುತ್ತದೆ. ಅದರಿಂದ ಗುರುತ್ವ ಕೇಂದ್ರವೂ ನಿಯಂತ್ರಣದಲ್ಲಿರುತ್ತದೆ. ಈ ರೀತಿಯ ನಿಯಂತ್ರಣ, ಕುಶಲತೆಯ ಪ್ರತೀಕ. (ಚಿತ್ರ-3)

ಗುರುತ್ವಕೇಂದ್ರದ ಹೆಚ್ಚಿನ ವಿವರಣೆಗಾಗಿ ಇನ್ನು ಕೆಲವು ಉದಾಹರಣೆಗಳನ್ನು ನೀಡಬಹುದು. ಪುಟ್‌ಬಾಲ್‌ಗಳನ್ನು ಬೆರಳಿನಿಂದ ತಿರುಗಿಸುವುದು, ಚೆಂಡುಗಳನ್ನು ಒಂದಾದ ಮೇಲೆ ಒಂದನ್ನು ಮೇಲಕ್ಕೆ ಎಸೆದು ಅವುಗಳು ಬೀಳದಂತೆ ನಿಯಂತ್ರಿಸಿ, ಮತ್ತೆ ಎಸೆಯುವುದು, (juggling)

. ವಿನೋದಕ್ಕಾಗಿ... ಈಗ ಉದ್ದಿನ ವಡೆಯ ಗುರುತ್ವ ಕೇಂದ್ರವು ಎಲ್ಲಿರುತ್ತದೆಂದು ಊಹಿಸಿ ನೋಡೋಣ.

ಮೂಲತಃ ಗುರುತ್ವ ಕೇಂದ್ರದಲ್ಲಿ ವಸ್ತುವಿನ ಸಂಪೂರ್ಣ ಭಾರ ಕೇಂದ್ರಿತವಾಗಿರುತ್ತದೆ. ಸಾಮರ್ಥ್ಯವಿದ್ದರೆ ಯಾವುದೇ ವಸ್ತುವಿನ ಗುರುತ್ವ ಕೇಂದ್ರವನ್ನು ಗುರುತಿಸಿ, ಆ ಬಿಂದುವಿನಿಂದ ಎಷ್ಟೇ ಭಾರವಿದ್ದರೂ, ಎತ್ತಬಹುದು.

Writer - ಪ್ರಭಾವತಿ.ಪಿ

contributor

Editor - ಪ್ರಭಾವತಿ.ಪಿ

contributor

Similar News