×
Ad

ಮಹಾವೀರ್ ಶರ್ಮಾ

Update: 2017-07-02 18:40 IST

ಚಿಕ್ಕಮಗಳೂರು, ಜು.2: ಶರ್ಮಾ ಆಯುರ್ವೇಧಿಕ್ ಭಂಡಾರ್ ಔಷಧಿ ಅಂಗಡಿಯಲ್ಲಿ ಮಾಲಿಕ ಮಹಾವೀರ್ ಶರ್ಮಾ(74)ನಿಧನರಾಗಿದ್ದಾರೆ.

ಕಳೆದ ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶರ್ಮಾ ರವಿವಾರ ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.ಮೃತರು ಪುತ್ರ ವಿನೋದ್‌ಶರ್ಮಾ ಕುಟುಂಬದವರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದು ಬಸವನಹಳ್ಳಿಯ ನಿವಾಸದಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರುಗಳು ಆಗಮಿಸಿ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ಕೋರಿದರು.

 ಶರ್ಮಾರವರು ನಗರದಲ್ಲಿ ಕಳೆದ 25 ವರ್ಷದಿಂದ ಆಯುರ್ವೇದ ಔಷಧಿಗಳನ್ನು ನೀಡುತ್ತ ವರ್ಷದಲ್ಲಿ ಎರಡು ಬಾರಿ ಅಸ್ತಮಾ ಹಾಗೂ ವಿವಿಧ ಖಾಯಿಲೆಗಳಿಗೆ ಉಚಿತ ದಿವ್ಯೌಷದ ನೀಡುವ ಪ್ರಖ್ಯಾತರಾಗಿದ್ದು ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಹಸ್ರಾರು ರೋಗಿಗಳು ಆಗಮಿಸುತ್ತಿದ್ದರು.ಸೋಮವಾರ ಬೆಳಗ್ಗೆ 9 ಗಂಟೆಗೆ ಉಪ್ಪಳ್ಳಿ ಚಿತಾಗಾರದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News