ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆಗಳು ಹ್ಯಾಕ್....!

Update: 2017-07-02 15:09 GMT

ಬೆಂಗಳೂರು, ಜು. 2: ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ಕಳವು ಮಾಡಿರುವ ಬಗ್ಗೆ ಇಪ್ಪತ್ತಕ್ಕೂ ಹೆಚ್ಚು ಜನರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರದ ಹೆಣ್ಣೂರು, ಕೊತ್ತನೂರು, ಆರ್.ಟಿ.ನಗರ ಹಾಗೂ ಬನ್ನೇರಘಟ್ಟ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿದಲ್ಲದೆ, ಎಟಿಎಂನಿಂದ 10 ಲಕ್ಷ ರೂ.ಗಳಿಗಿಂತಲೂ ಹೆಚ್ಚಿನ ಹಣ ಕಳವು ಮಾಡಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರಿಗೆ ಪೊಲೀಸರಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ.

 ಕೆಲವರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡಿದೆ ಎಂದು ಶನಿವಾರ ಮಧ್ಯರಾತ್ರಿ ಮೊಬೈಲ್ ಎಸ್‌ಎಂಎಸ್ ಬಂದ ಕಾರಣದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿರುವ ಒಬ್ಬರ ಖಾತೆಯಲ್ಲಿ ರಾತ್ರಿ 20 ಸಾವಿರ ರೂ. ನಗದು ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಿಸಿಟಿವಿ ಪರಿಶೀಲನೆ: ಬ್ಯಾಂಕ್ ಖಾತೆಗಳ ಪಾಸ್‌ವಾರ್ಡ್ ಕದ್ದು ಎಟಿಎಂಗಳಿಗೆ ನುಗ್ಗಿ ಕಳವು ಮಾಡಿರುವ ಬಗ್ಗೆ ಮಾಹಿತಿ ಪಡೆದು ಎಟಿಎಂ ಕೇಂದ್ರಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ ದುಷ್ಕರ್ಮಿಗಳ ಪತ್ತೆ ಮಾಡಲು ಪೊಲೀಸರು ಮುಂದಾಗಿರುವುದು ತಿಳಿದುಬಂದಿದೆ.

ನಕಲಿ ಎಟಿಎಂ:ದುಷ್ಕರ್ಮಿಗಳ ನಕಲಿ ಎಟಿಎಂ ಮಾಡಿಕೊಂಡು ಸಂಬಂಧಪಟ್ಟ ಖಾತೆಗಳ ನಂಬರ್ ಬಳಸಿ ಅದರ ಪಾಸ್‌ವಾರ್ಡ ಹಾಕಿ ಎಟಿಎಂಗಳಿಂದ ನಗದು ತೆಗೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News