ತಿಂಗಳೆ ಪ್ರಭಾಕರ ಹೆಗ್ಡೆ
Update: 2017-07-03 23:16 IST
ಹೆಬ್ರಿ, ಜು.3: ಹಿರಿಯ ಕಾಂಗ್ರೆಸ್ ಮುಖಂಡ ನಾಡ್ಪಾಲು ಗ್ರಾಪಂಯ ಮಾಜಿ ಅಧ್ಯಕ್ಷ ಬಿ.ಪ್ರಭಾಕರ ಹೆಗ್ಡೆ ತಿಂಗಳೆ (72) ನಿಧನರಾದರು. ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಎಳವೆಯಲ್ಲೇ ಸಮಾಜಮುಖಿ ಚಿಂತನೆಗಳೊಂದಿಗೆ ನಾಯಕತ್ವದ ಗುಣ ಬೆಳೆಸಿಕೊಂಡಿದ್ದ ಪ್ರಭಾಕರ ಹೆಗ್ಡೆ ಕಾರ್ಕಳದ ಅಂದಿನ ಶಾಸಕರಾಗಿದ್ದ ಎಂ.ವೀರಪ್ಪ ಮೊಯ್ಲಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ನಾಡ್ಪಾಲಿನ ಅಭಿವೃದ್ಧಿ ಯಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಅವರು ಎಲ್ಲರಿಗೂ ಮಾರ್ಗದರ್ಶಕ ರಾಗಿ ಜನಾನುರಾಗಿಯಾಗಿದ್ದರು.
ಪ್ರಭಾಕರ ಹೆಗ್ಡೆ ಅವರ ನಿಧನಕ್ಕೆ ಕಾರ್ಕಳ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಎಚ್. ಪ್ರವೀಣ್ ಬಲ್ಲಾಳ್, ನೀರೆ ಕೃಷ್ಣ ಶೆಟ್ಟಿ, ಸೀತಾನದಿ ರಮೇಶ್ ಹೆಗ್ಡೆ ಮುಂತಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.