×
Ad

ಕಸ್ತೂರಿ ಕಾಳಿಂಗ ಪೈ

Update: 2017-07-05 17:04 IST

ಮೂಡುಬಿದಿರೆ, ಜು.5: ಇಲ್ಲಿನ ದಿ. ಕಾಳಿಂಗ ಪೈ ಅವರ ಧರ್ಮಪತ್ನಿ ಕಸ್ತೂರಿ ಕಾಳಿಂಗ ಪೈ (82) ಅಲ್ಪಕಾಲದ ಅಸೌಖ್ಯದಿಂದ ಜುಲೈ4 ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಅವರು ಆರು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೂಡುಬಿದಿರೆಯ ಪಯೋನಿಯರ್ ಇಂಡಸ್ಟ್ರೀಸ್‌ನ ಪಾಲುದಾರರಾಗಿದ್ದ ಅವರು ಸಾತ್ವಿಕ, ಧಾರ್ಮಿಕ ಮನೋಭಾವದವರಾಗಿದ್ದರು. ಸಹಕಾರಿ ರಂಗ ಸೇರಿದಂತೆ ಆರೆಸ್ಸೆಸ್, ವಿಶ್ವಹಿಂದೂ ಪರಿಷತ್‌ನಲ್ಲಿ ಸಕ್ರಿಯರಾಗಿದ್ದ ತಮ್ಮ ಪತಿ ಕಾಳಿಂಗ ಪೈಯವರ ಕರ್ತವ್ಯದಲ್ಲಿ ಬೆಂಬಲವಾಗಿ ನಿಂತು ಸೇವಾ ಕಾರ್ಯಗಳ ಹಿನ್ನೆಲೆಯಲ್ಲಿ ನೆರವಾಗಿದ್ದ ಅವರು ಅರುವತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಇಲ್ಲಿನ ’ವನಿತಾ ಸಮಾಜ’ದಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News