ವೆಂಕಟ್ರಮಣ ಹೆಬ್ಬಾರ
Update: 2017-07-05 19:20 IST
ಭಟ್ಕಳ, ಜು. 5: ತಾಲ್ಲೂಕಿನ ಮಾರುಕೇರಿಯ ವೆಂಕಟ್ರಮಣ (ರತ್ನಾಕರ) ಶೇಷಗಿರಿ ಹೆಬ್ಬಾರ (59) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಇತ್ತೀಚೆಗೆ ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ನಾಟಾ ಉದ್ದಿಮೆದಾರರಾಗಿದ್ದು, ಭಟ್ಕಳ ಸೇರಿದಂತೆ ಉತ್ತರ ಕನ್ನಡ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಅರಣ್ಯ ಇಲಾಖೆಯಿಂದ ನಡೆಸಲ್ಪಡುವ ನಾಟಾ ಟೆಂಡರುಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಸಹೋದರ, ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.