ಆರು ಮಂದಿ ಕೆಎಎಸ್ ಅಧಿಕಾರಿಗಳ ವರ್ಗಾವಣೆ
Update: 2017-07-05 19:40 IST
ಬೆಂಗಳೂರು, ಜು. 5: ಕೆಎಎಸ್ ಹಿರಿಯ ಮತ್ತು ಕಿರಿಯ ಶ್ರೇಣಿಯ ಆರು ಮಂದಿ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಹೆಸರಿನ ಮುಂದಿನ ಸೂಚಿತ ಸ್ಥಳಕ್ಕೆ ನಿಯೋಜಿಸುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಗಂಗೂಬಾಯಿ ರಮೇಶ್ ಮಾನಕರ್- ಅಪರ ಪ್ರಾದೇಶಿಕ ಆಯುಕ್ತರು ಬೆಳಗಾವಿ, ಟಿ.ವೆಂಕಟೇಶ್ ವಿಶೇಷ ಜಿಲ್ಲಾಧಿಕಾರಿ ಆರ್/ಆರ್ ಭೂಸ್ವಾಧೀನ ಕೃಷ್ಣಾ ಮೇಲ್ದಂಡೆ ಯೋಜನೆ ಜಮಖಂಡಿ, ಟಿ.ಯೋಗೇಶ್ ಅಪರ ಜಿಲ್ಲಾಧಿಕಾರಿ ಮೈಸೂರು ಜಿಲ್ಲೆ.
ಶಾರದ ಸಿ.ಕೋಲಾರ-ಪ್ರಾಶುಂಪಾಲರು ಜಿಲ್ಲಾ ತರಬೇತಿ ಸಂಸ್ಥೆ ಧಾರವಾಡ, ಡಾ.ಬಿ.ಶರಣಪ್ಪ- ವಿಶೇಷ ಭೂಸ್ವಾಧೀನಾಧಿಕಾರಿ ಕೃಷ್ಣಾ ಮೇಲ್ದಂಡೆ ಯೋಜನೆ ಇಂಡಿ-ವಿಜಯಪುರ ಜಿಲ್ಲೆ, ಗಾಯತ್ರಿ ಎಸ್.ನಾಯಕ್-ಉಪ ಆಯುಕ್ತರು (ಕಂದಾಯ) ಮಂಗಳೂರು ಮಹಾನಗರ ಪಾಲಿಕೆ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.