×
Ad

ಜು.15 ರಂದು ಪಾಸ್‌ಪೋರ್ಟ್ ಮೇಳ

Update: 2017-07-05 19:48 IST

ಬೆಂಗಳೂರು, ಜು.5: ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಿಂದ ಜು.15 ರಂದು ರಾಜ್ಯದ ವಿವಿಧ ನಗರಗಳಲ್ಲಿ ಪಾಸ್‌ಪೋರ್ಟ್ ವೆುೀಳ ಹಮ್ಮಿಕೊಳ್ಳಲಾಗಿದೆ.
ಅದರ ಭಾಗವಾಗಿ ನಗರದ ಲಾಲ್‌ಬಾಗ್ ರಸ್ತೆ ಮತ್ತು ಮಾರತ್‌ಹಳ್ಳಿ ಕಚೇರಿ ಹಾಗೂ ಹುಬ್ಬಳ್ಳಿ ಮತ್ತು ಮಂಗಳೂರು ನಗರದಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಗಳಲ್ಲಿ ಹಾಗೂ ಮೈಸೂರಿನ ಅಂಚೆ ಕಚೇರಿ ಪಾಸ್‌ಪೋರ್ಟ್ ಕೇಂದ್ರ ಮತ್ತು ಕಲಬುರಗಿಯ ಪಾಸ್‌ಪೋರ್ಟ್ ಸೇವಾ ಲಘು ಕೇಂದ್ರದಲ್ಲಿ ಮೇಳ ಜರುಗಲಿದೆ.
  
www.passportindia.gov.in  ಪಾಸ್‌ಪೋರ್ಟ್ ಸಂಬಂಧಿತ ವಿಷಯಗಳಿಗಾಗಿ ಅರ್ಜಿ ಸಲ್ಲಿಸಲು ವಾರದ ದಿನಗಳಲ್ಲಿ ಸಾಧ್ಯವಾಗದ ಜನರ ಅನುಕೂಲ್ಕಕಾಗಿ ಈ ವಿಶೇಷ ಪಾಸ್‌ಪೋರ್ಟ್ ಮೇಳ ಹಮ್ಮಿಕೊಂಡಿದ್ದು, ಪಾಸ್ ಪೋರ್ಟ್ ಮೇಳದಲ್ಲಿ ನೇರ ಸಂದರ್ಶನದ ಅವಕಾಶ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು. ಅದರಲ್ಲಿ ಮೆನುವಿನಲ್ಲಿ ಪಾಸ್‌ಪೋರ್ಟ್ ಕಚೇರಿ ಜಾಗದಲ್ಲಿ ಬೆಂಗಳೂರನ್ನು ಆಯ್ಕೆ ಮಾಡಿ ಬಳಿಕ ಪಾಸ್‌ಪೋರ್ಟ್ ಮೇಳದ ಆವಶ್ಯಕತೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಮಾನ್ಯ ವರ್ಗದ ಸಂದರ್ಶನ ಪಟ್ಟಿಯನ್ನು ಐದು ದಿನಗಳ ಮುಂಚಿತವಾಗಿ ಜು.10 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News