ರಾಜ್ಯದ ಮಹಾಲೇಖಪಾಲರ ಅಧಿಕಾರ ಸ್ವೀಕಾರ
Update: 2017-07-05 19:49 IST
ಬೆಂಗಳೂರು, ಜು.5: ರಾಜ್ಯದ ಸಾಮಾನ್ಯ ಮತ್ತು ಸಾಮಾಜಿಕ ವಲಯದ ಮಹಾಲೇಖಪಾಲರಾಗಿ ಇ.ಪರಮೇಶ್ವರನ್ ನಿವೇದಿತಾ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
ಈ ಮೊದಲು ಬೆಂಗಳೂರಲ್ಲಿ ವಾಣಿಜ್ಯ ಪರಿಶೋಧನೆಯ ಪ್ರಧಾನ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದ ಇವರು, ರಕ್ಷಣಾ ಸಚಿವಾಲಯದ ವಿವಿಧ ಸಾರ್ವಜನಿಕ ಕ್ಷೇತ್ರದ ಘಟಕಗಳ ಲೆಕ್ಕ ಪರಿಶೋಧಕ ಹುದ್ದೆಯನ್ನೂ ನಿರ್ವಹಿಸಿದ್ದರು.
ಪರಮೇಶ್ವರನ್ ನಿವೇದಿತಾ, ಮುಂಬಯಿ ಹಾಗೂ ದಿಲ್ಲಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಚಿವಾಲಯಗಳಿಗೆ ಸಂಬಂಧಿತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ನೀತಿ ಯೋಜನೆಗಳ ಜವಾಬ್ದಾರಿ, ಭಾರತದ ವಿಶೇಷ ಗುರುತಿನ ಪ್ರಾಧಿಕಾರದ ಸಹಾಯಕ ಮಹಾ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮಹಾಲೇಖಪಾಲ ಹುದ್ದೆಗೆ ಮುನ್ನ ಅವರು ಬೆಂಗಳೂರಿನಲ್ಲಿ ವಾಣಿಜ್ಯ ಲೆಕ್ಕಪರಿಶೋಧನೆಯ ಪ್ರಧಾನ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಪ್ರಕಟಣೆ ತಿಳಿಸಿದೆ.