ಭಾರತದ ಅತ್ಯಂತ ದೊಡ್ಡ ಅಕ್ಕಿ ಬ್ರ್ಯಾಂಡ್ ಮೇಲೆ ತೆರಿಗೆ ಯಾಕಿಲ್ಲ ಗೊತ್ತೇ ?

Update: 2017-07-07 12:42 GMT

ಹೊಸದಿಲ್ಲಿ, ಜು.7: ದೇಶದಲ್ಲಿ ಬಹುತೇಕ ಸರಕು ಮತ್ತು ಸೇವೆಗಳ ಮೇಲೆ  ಜಿಎಸ್ ಟಿ ತೆರಿಗೆ ಪದ್ಧತಿ ಜಾರಿಯಾಗಿದೆ. ಆದರೆ ದೇಶದ ಅತ್ಯಂತ ದೊಡ್ಡ ಅಕ್ಕಿ ಬ್ರ್ಯಾಂಡ್ ಆದ “ಇಂಡಿಯಾ ಗೇಟ್” ಮೇಲೆ ಜಿಎಸ್ ಟಿ ಜಾರಿಯಾಗಿಲ್ಲ ಎಂದರೆ ನಂಬಲೇಬೇಕು. ಇದಕ್ಕೆ ಕಾರಣ ಕಂಪೆನಿಯು ಟ್ರೇಡ್ ಮಾರ್ಕ್ಸ್ ಕಾಯ್ದೆ 1999ರ ಅಡಿಯಲ್ಲಿ ಹೆಸರನ್ನು ನೋಂದಾಯಿಸಿಲ್ಲ ಎನ್ನುವುದು.

“ಇಂಡಿಯಾ ಗೇಟ್ , ಇಂಡಿಯನ್ ಫಾರ್ಮ್, ಲೋಟಸ್ ಆ್ಯಂಡ್ ಯುನಿಟಿ ಬ್ರಾಂಡ್ ಗಳು ಕೆಆರ್ ಬಿಎಲ್ ಲಿ. ಮಾಲಕತ್ವದಲ್ಲಿದೆ ಹಾಗೂ 1999ರ ಟ್ರೇಡ್ ಮಾರ್ಕ್ಸ್ ಕಾಯ್ದೆಯಡಿ ನೋಂದಾಯಿಸಿಲ್ಲ. ಮಾರಾಟ ಮಾಡುವ ರಾಜ್ಯಗಳಿಗೆ ಅನುಗುಣವಾಗಿ ಬ್ರಾಂಡೆಡ್ ಅಕ್ಕಿ ತೆರಿಗೆ ವಿನಾಯಿತಿ ಹೊಂದಬಹುದು ಅಥವಾ ಮೌಲ್ಯವರ್ಧಿತ ತೆರಿಗೆಯೊಂದಿಗೆ ಮುಂದುವರಿಯಬಹುದಾಗಿದೆ ಎಂದು ಕೆಆರ್ ಬಿಎಲ್ ಲಿ. ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News