×
Ad

ಕೈಗಾರಿಕೋದ್ಯಮಿ ಓಸ್ವಾಲ್‌ ರ ‘ಡಿಜಿಟಲ್ ಬಂಧನ’ ಪ್ರಕರಣ | 5 ರಾಜ್ಯಗಳ 11 ಸ್ಥಳಗಳಲ್ಲಿ ED ಶೋಧ ಕಾರ್ಯಾಚರಣೆ

Update: 2025-12-25 20:34 IST

Photo Credit : PTI 

ಹೊಸದಿಲ್ಲಿ, ಡಿ. 25: ಡಿಜಿಟಲ್ ಬಂಧನ ಹಗರಣಕ್ಕೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಐದು ರಾಜ್ಯಗಳ 11 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಈ ಡಿಜಿಟಲ್ ಬಂಧನ ಹಗರಣದಲ್ಲಿ ಲುಧಿಯಾನ ಮೂಲದ ಕೈಗಾರಿಕೋದ್ಯಮಿ ಎಸ್.ಪಿ. ಓಸ್ವಾಲ್ 7 ಕೋಟಿ ರೂ.ಗೂ ಅಧಿಕ ಹಣ ಕಳೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪಂಜಾಬ್, ಹರ್ಯಾಣ, ರಾಜಸ್ಥಾನ, ಗುಜರಾತ್ ಹಾಗೂ ಅಸ್ಸಾಂನ 11 ಸ್ಥಳಗಳಲ್ಲಿ ಸೋಮವಾರ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.

ಶೋಧ ಕಾರ್ಯಾಚರಣೆ ಸಂದರ್ಭ ವಿವಿಧ ದೋಷಾರೋಪ ದಾಖಲೆಗಳು ಹಾಗೂ ಡಿಜಿಟಲ್ ಸಾಧನಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಹಣ ವರ್ಗಾಯಿಸಲು ನಕಲಿ ಖಾತೆ (ಮ್ಯೂಲ್)ಗಳನ್ನು ನೀಡಿದ ಆರೋಪದಲ್ಲಿ ಅಸ್ಸಾಂನ ರೂಮಿ ಕಲಿಟಾ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ.

ಈಡಿ ತನಿಖೆ ಎಸ್.ಪಿ. ಓಸ್ವಾಲ್ ಅವರ ಡಿಜಿಟಲ್ ಬಂದನದ ವಿವರಗಳನ್ನು ಬಹಿರಂಗಪಡಿಸಿದೆ. ವಂಚಕರು ಸಿಬಿಐ ಅಧಿಕಾರಿಗಳಂತೆ ಸೋಗು ಹಾಕಿ ಪ್ರಾಧಿಕಾರ ಹಾಗೂ ನ್ಯಾಯಾಲಯದ ನಕಲಿ ದಾಖಲೆಗಳನ್ನು ಬಳಸಿ ಓಸ್ವಾಲ್ ಅವರಿಗೆ ಬೆದರಿಕೆ ಒಡ್ಡಿದ್ದಾರೆ. ಬಳಿಕ ಓಸ್ವಾಲ್ ಅವರಿಗೆ ಒತ್ತಡ ಹೇರಿ 7 ಕೋಟಿ ರೂ.ವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಈ ಮೊತ್ತದಲ್ಲಿ 5.24 ಕೋಟಿ ರೂ. ವಂಚಕರ ಖಾತೆಗಳಲ್ಲಿ ಪತ್ತೆಯಾಗಿದೆ. ಅದನ್ನು ಓಸ್ವಾಲ್ ಅವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News