ಪೊಲೀಸ್ ಟೋಪಿ ಧರಿಸಿ, ಪೊಲೀಸರ ಬೈಕನ್ನೇ ಎಗರಿಸಿದ ಕುಡುಕ!
Update: 2017-07-10 21:58 IST
ಬೆಂಗಳೂರು, ಜು.10: ಮದ್ಯಪಾನ ಮಾಡಿದ್ದ ಯುವಕನೋರ್ವ ಪೊಲೀಸ್ ಟೋಪಿ ಧರಿಸಿ, ಪೊಲೀಸರ ಬೈಕನ್ನೇ ಎಗರಿಸಿಕೊಂಡು ಹೋದ ಘಟನೆ ಹಾಸನದಲ್ಲಿ ನಡೆದಿದೆ.
ಈ ಬಗ್ಗೆ ಎಎನ್ ಐ ವರದಿ ಮಾಡಿದ್ದು, ಸುಮಾರು 1 ಕಿ.ಮೀ.ವರೆಗೆ ಪೊಲೀಸರು ಆತನನ್ನು ಬೆನ್ನತ್ತಿದ್ದಾರೆ. ಈ ಘಟನೆಯನ್ನು ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ವಿಡಿಯೋ ಮಾಡಿದ್ದಾರೆ. ಪೊಲೀಸರು ಬೆನ್ನಟ್ಟುತ್ತಿದ್ದರೂ ಯಾವುದೇ ಭಯವಿಲ್ಲದೆ, ನಗುತ್ತಾ “ಪೊಲೀಸ್ರ ಬೈಕ್ ಎತ್ತಾಕ್ಕೊಂಡ್ ಬಂದೆ” ಎಂದು ಆತ ಹೇಳುತ್ತಾನೆ.
ಕೊನೆಗೂ ಆತನನ್ನು ಹಿಡಿಯುವಲ್ಲಿ ಟ್ರಾಫಿಕ್ ಪೊಲೀಸರು ಯಶಸ್ವಿಯಾಗಿದ್ದಾರೆ.