ಕತರ್: ಹಾಲು ನೀಡಲು ವಿಮಾನ ಹತ್ತಿ ಬಂದ ದನಗಳು !

Update: 2017-07-13 11:21 GMT

ದೋಹ,ಜು.13: ಇದೇ ಪ್ರಥಮ ಬಾರಿಗೆ ಕತರ್‍ನಲ್ಲಿ ಇಂತಹದೊಂದು ಪ್ರಯೋಗ ನಡೆಸಲಾಗುತ್ತಿದೆ. ಹಾಲಿಗಾಗಿ ದನಗಳನ್ನು ಸಾಕುವುದು ಸಾಮಾನ್ಯವಾದರೂ ಅವುಗಳನ್ನು ವಿಮಾನದಲ್ಲಿ ತರುವುದು ಅಪರೂಪ. ಆದರೆ ಕತರ್‍ಗೆ ವಿಮಾನದಲ್ಲಿ ದನಗಳನ್ನು  ತರುವ ಆಶಯವನ್ನು ವ್ಯಕ್ತಪಡಿಸಿದ ದೋಹದ ಪವರ್ ಇಂಟರ್‍ನ್ಯಾಸನಲ್ ಹೋಲ್ಡಿಂಗ್ ಕಂಪೆನಿ ಚೇರ್‍ಮೆನ್ ಸಿರಿಯದ ಉದ್ಯಮಿ ಮೌತಾಸ್ ಅಲ್‍ಖಯ್ಯಾತ್ ಅದನ್ನು ನಡೆಸಿದ್ದಾರೆ.

165 ಯುರೋಪಿಯನ್ ದನಗಳನ್ನು ಜರ್ಮನಿಯಿಂದ ವಿಮಾನದಲ್ಲಿ  ಬುಡಾಫೆಸ್ಟ್ ದಾರಿಯಾಗಿ  ಮಂಗಳವಾರ ರಾತ್ರಿ ದೋಹಕ್ಕೆ  ತರಿಸಿಕೊಂಡಿದ್ದಾರೆ. ಅಲ್‍ಖೊರದ ಉಮ್ಮುಲ್ ಹವಾಯದ ಬಾಲ್ದನ್ ಫಾರ್ಮ್‍ಗೆ ಅವುಗಳನ್ನು ಅಲ್ಲಿಂದ ಸಾಗಿಸಲಾಗಿದೆ. ಕೂಡಲೇ ಹಾಲು ಕೊಡಲು ಸಾಧ್ಯವಿರುವ ಹಸುಗಳನ್ನು ತರಿಸಿಕೊಳ್ಳಲಾಗಿದೆ ಎಂದು ಪವರ್ ಇಂಟರ್‍ನ್ಯಾಷನಲ್ ಹೋಲ್ಡಿಂಗ್ ಕಂಪೆನಿ ವಕ್ತಾರ ತಿಳಿಸಿದ್ದಾರೆ. ಒಟ್ಟು 4000 ಹಸುಗಳನ್ನು ತರಿಸಿಕೊಳ್ಳಲಿದ್ದು, ಇದಕ್ಕಾಗಿ 60 ವಿಮಾನ ಸೇವೆ ಬೇಕಾಗಬಹುದು ಎಂದು ಅವರು ಹೇಳಿದರು. ಮುಂದಿನ ಹಂತದಲ್ಲಿ ಅಮೆರಿಕ, ಆಸ್ಟ್ರೇಲಿಯಗಳಿಂದ ದನಗಳನ್ನು ತರಿಸಿಕೊಳ್ಳಲಾಗುತ್ತದೆ.

ಎಲ್ಲ ದನಗಳು ಕತರ್‍ಗೆ ಬಂದು ತಲುಪಿದರೆ ದೇಶದ ಶೇ. 30ರಷ್ಟು ಹಾಲಿನ ಬೇಡಿಕೆ ಈಡೇರಿಸಬಹುದು ಎನ್ನುವ ನಿರೀಕ್ಷೆಯನ್ನುಅಲ್ ಖಯಾತ್ ವ್ಯಕ್ತಪಡಿಸಿದ್ದಾರೆ. ಅಲ್‍ಖೊರಿಯಲ್ಲಿ 70 ಫುಟ್‍ಬಾಲ್ ಮೈದಾನದಷ್ಟು ದೊಡ್ಡದಾದ ಜಾಗದಲ್ಲಿ ಫಾರ್ಮ್ ಆರಂಭಿಸಲಾಗಿದೆ. ಈ ಹಿಂದೆ ಹಡಗಿನಲ್ಲಿ ದನಗಳನ್ನು ತರಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿತ್ತು. ಸೌದಿಅರೇಬಿಯ ಸಹಿತ  ಕೆಲವು ದೇಶಗಳು ಕತರ್‍ಗೆ  ನಿಷೇಧ ಹೇರಿದೊಡನೆ ಈ ಯೋಜನೆ ಬದಲಾಯಿಸಿ ದನಗಳನ್ನು ವಿಮಾನದಲ್ಲಿ ತರಿಸಿಕೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News