×
Ad

ಮಾಜಿ ಸಂಸದ ನಾಯ್ಕ ನಿಧನಕ್ಕೆ ಸಿಎಂ ಶೋಕ

Update: 2017-07-13 18:14 IST

ಬೆಂಗಳೂರು, ಜು. 13: ಮಾಜಿ ಸಂಸದ ಜಿ.ದೇವರಾಯ ನಾಯ್ಕ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆನರಾ ಲೋಕಸಭಾ ಕ್ಷೇತ್ರವನ್ನು 1980, 1984, 1989 ಹಾಗೂ 1991 ಹೀಗೆ ಸತತವಾಗಿ ನಾಲ್ಕು ಬಾರಿ ಪ್ರತಿನಿಧಿಸಿ, ಕೆನರಾ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ನ ಭದ್ರ ಕೋಟೆಯನ್ನಾಗಿಸಿದ್ದ ದೇವರಾಯ ನಾಯ್ಕರ ಕರಾವಳಿ ಭಾಗದಲ್ಲಿ ಜನಪ್ರಿಯತೆಗೆ ಸಾಕ್ಷಿಯಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.

ದೇವರಾಯ ನಾಯ್ಕ ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಅವರ ಅಪಾರ ಬಂಧು-ಮಿತ್ರರಿಗೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News