×
Ad

ಶೈಕ್ಷಣಿಕ ತೆರಿಗೆ ವಿನಾಯಿತಿ ರದ್ದು ಪ್ರಕರಣ: ಒಂದು ವಾರದಲ್ಲಿ ಸರಿಪಡಿಸಲು ಹೈಕೋರ್ಟ್ ಆದೇಶ

Update: 2017-07-13 21:31 IST

ಬೆಂಗಳೂರು, ಜು.13: ಆರಾಧನಾ ಶಾಲೆಗೆ ಆಸ್ತಿ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿದ ಪ್ರಕರಣವನ್ನು ಒಂದು ವಾರದಲ್ಲಿ ಸರಿಪಡಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ಸಹಾಯಕ ಕಂದಾಯ ಅಧಿಕಾರಿಗೆ ಹೈಕೋರ್ಟ್ ಸೂಚನೆ ನೀಡಿದೆ.

 ಈ ಸಂಬಂಧ ದಿ ಸಿಸ್ಟರ್ಸ್ ಆಫ್ ಪ್ರೀಶಿಯಸ್ ಬ್ಲಡ್ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಹೈಕೋರ್ಟ್‌ಗೆ ಖುದ್ದು ಹಾಜರಾಗಲು ಬಿಬಿಎಂಪಿ ಆಯುಕ್ತ ಹಾಗೂ ಸಹಾಯಕ ಕಂದಾಯ ಅಧಿಕಾರಿಗೆ ಸೂಚಿಸಲಾಗಿತ್ತು. ಹೀಗಾಗಿ, ಇಬ್ಬರು ಕೋರ್ಟ್‌ಗೆ ಹಾಜರಾಗಿ ನ್ಯಾಯಪೀಠಕ್ಕೆ ವಿವರಣೆ ನೀಡಿದರು. ದಿ ಸಿಸ್ಟರ್ಸ್ ಆಫ್ ಪ್ರೀಶಿಯಸ್ ಬ್ಲಡ್ ಅಧೀನದಲ್ಲಿ ಆರಾಧನಾ ಶಾಲೆ ನಡೆಸಲಾಗುತ್ತದೆ. ಈ ಆವರಣದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ನೃತ್ಯ, ಕರಾಟೆ ಕಲಿಸಿಕೊಡುವ ಮೂಲಕ ವಾ ಣಿಜ್ಯ ಚಟುವಟಿಕೆ ನಡೆಸಲಾಗುತ್ತಿದೆ.

ಹೀಗಾಗಿ, ಆಸ್ತಿ ತೆರಿಗೆ ಪಾವತಿಯಲ್ಲಿ ವಿನಾಯಿತಿ ನೀಡಬಾರದು ಎಂದು ಸಹಾಯಕ ಕಂದಾಯ ಅಧಿಕಾರಿಯು ಬಿಬಿಎಂಪಿ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಆಯುಕ್ತರು, 2008ನೆ ಸಾಲಿನ ಆಸ್ತಿ ತೆರಿಗೆ ಪಾವತಿಯಿಂದ ಆರಾಧನ ಶಾಲೆಗೆ ವಿನಾಯಿತಿ ನೀಡಲು ನಿರಾಕರಿಸಿದ್ದರು. ಹೀಗಾಗಿ, ಈ ಆದೇಶವನ್ನು ಪ್ರಶ್ನಿಸಿ ದಿ ಸಿಸ್ಟರ್ಸ್ ಆಫ್ ಪ್ರೀಶಿಯಸ್ ಬ್ಲಡ್ ಸಂ್ಥೆಯು ಹೈಕೋರ್ಟ್ ಮೆಟ್ಟಿಲೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News