ಈಗಲೇ ನೀರು ತುಂಬಿಸಲಿ

Update: 2017-07-13 18:51 GMT

ಮಾನ್ಯರೆ,

ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಮಳೆ ಕೈ ಕೊಟ್ಟ ಪರಿಣಾಮದಿಂದ ಭೀಕರ ಬರಗಾಲ ಸಂಭವಿಸಿರುವುದರಿಂದ ಕೆರೆ ಕಟ್ಟೆಗಳು ನೀರಿಲ್ಲದೆ ಬತ್ತಿ ಹೋಗಿವೆ. ಆದರೆ ಈ ಬಾರಿ ರಾಜ್ಯದ ಉತ್ತರ ಕರ್ನಾಟಕ ಮತ್ತು ಕರಾವಳಿ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇದರಿಂದಾಗಿ ಆಲಮಟ್ಟಿ, ಕೆ ಆರ್ ಎಸ್, ಕಬಿನಿ, ಹೇಮಾವತಿ, ಹಾರಂಗಿ ಹೀಗೆ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

ಈ ಸಂದರ್ಭದಲ್ಲೇ ನೀರಿಲ್ಲದೆ ಬತ್ತಿ ಹೋಗಿರುವ ಕೆರೆ ಕಟ್ಟೆಗಳಿಗೆ ಜಲಾಶಯಗಳಿಂದ ನೀರನ್ನು ತುಂಬಿಸಬೇಕು.ಏಕೆಂದರೆ ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಮತ್ತು ಜಾನುವಾರುಗಳಿಗೆ ನೀರು ಕುಡಿಯಲು ನೀರು ಹಾಗೂ ರೈತರ ಜಮೀನುಗಳಲ್ಲಿ ಫಸಲುಗಳಿಗೆ ನೀರು ಹರಿಸಲು ಅನೂಕೂಲವಾಗುತ್ತದೆ. ಆದ್ದರಿಂದ ಸರಕಾರ ಈ ಕುರಿತು ಗಂಭೀರವಾಗಿ ಚಿಂತಿಸಿ ಶೀಘ್ರವಾಗಿ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಕೆರೆಗಳಿಗೆ ಪುನಶ್ಚೇತನ ನೀಡಲಿ.

-ಮೌಲಾಲಿ ಕೆ. ಬೋರಗಿ, ಸಿಂದಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News