ವಿಂಬಲ್ಡನ್‌ನಲ್ಲಿ ಒಳಉಡುಪು ವಿವಾದ!

Update: 2017-07-14 04:21 GMT

ಲಂಡನ್, ಜು. 14: ವಿಂಬಲ್ಡನ್‌ನಲ್ಲಿ ಶ್ವೇತವಸ್ತ್ರ ಧರಿಸಬೇಕೆಂಬ ವಸ್ತ್ರಸಂಹಿತೆಯನ್ನು ವಿಂಬಲ್ಡನ್ ಆಯೋಜಕರು ಕಡ್ಡಾಯಗೊಳಿಸಿದ್ದಾರೆ.

ಕಿರಿಯರ ಡಬಲ್ಸ್ ಟೂರ್ನಿಯ ನಾಲ್ವರು ಬಾಲಕರು ಕಪ್ಪು ಒಳಉಡುಪು ಧರಿಸಿದ್ದನ್ನು ಪತ್ತೆ ಮಾಡಿ, ಅವರ ಒಳ ಉಡುಪು ಬದಲಿಸುವಂತೆ ಸೂಚಿಸಿದ ಕುತೂಹಲಕರ ಪ್ರಸಂಗ ವರದಿಯಾಗಿದೆ.

ಅಗ್ರಶ್ರೇಯಾಂಕದ ಡಬಲ್ಸ್ ಜೋಡಿಯಾದ ಹಂಗೇರಿಯ ಸೋಂಬೋರ್ ಪಿರೋಸ್ ಹಾಗೂ ಚೀನಾದ ವೂ ಯಿಬಿಂಗ್ ಅವರಿಗೆ ಬಿಳಿ ಒಳ ಉಡುಪುಗಳನ್ನು ಹಸ್ತಾಂತರಿಸಿದ ಟೆನಿಸ್ ಕೋರ್ಟ್ ಬಳಿಯ ಅಧಿಕಾರಿಗಳು, ಆಟಗಾರರನ್ನು ಲಾಕರ್ ಕೊಠಡಿಗೆ ವಾಪಾಸು ಕಳುಹಿಸಿ, ಬಿಳಿ ಒಳ ಉಡುಪು ಧರಿಸಿಕೊಂಡು ಬರುವಂತೆ ಸೂಚಿಸಿದರು.

ಪಿರೋಸ್ ಬಿಳಿ ಚಡ್ಡಿಯ ಒಳಗೆ ನೀಲಿ ಒಳ ಉಡುಪು ಧರಿಸಿದ್ದರೆ, ಅವರ ಸಹ ಆಟಗಾರ ವೂ ಕಪ್ಪು ಒಳ ಉಡುಪು ಧರಿಸಿದ್ದರು. ಈ ಜೋಡಿಯ ಎದುರಾಳಿಗಳಾದ ಬ್ರೆಝಿಲ್‌ನ ಜೋವೋ ರೀಸ್ ಡ ಸಿಲ್ವ ಅವರಿಗೂ ಇದೇ ಸಮಸ್ಯೆ ಎದುರಾಯಿತು. ಆದರೆ ಅಧಿಕಾರಿಗಳ ವರ್ತನೆಯನ್ನು ಪ್ರತಿಭಟಿಸಿದ ಅವರು, ಬೂದು ಬಣ್ಣದ ಒಳ ಉಡುಪು ಸ್ವೀಕಾರಾರ್ಹ ಎಂದು ಪ್ರತಿಪಾದಿಸಿದರು. ಅದರೆ ಪಟ್ಟು ಬಿಡದ ಅಧಿಕಾರಿಗಳು, ಅದನ್ನು ಬದಲಿಸುವಂತೆ ಮಾಡುವಲ್ಲಿ ಯಸಸ್ವಿಯಾದರು, ಇದರಿಂದಾಗಿ ಆಟದ ಆರಂಭ ಅರ್ಧ ಗಂಟೆ ವಿಳಂಬವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News