ಮಾಧ್ಯಮಗಳಿಗೆ ನಾನಾಗಿಯೇ ಬಹಿರಂಗಪಡಿಸಿಲ್ಲ: ಡಿ.ರೂಪಾ
Update: 2017-07-14 22:18 IST
ಬೆಂಗಳೂರು, ಜು.14: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ 2 ಕೋಟಿ ರೂ.ಮೊತ್ತದ ಭ್ರಷ್ಟಾಚಾರವನ್ನು ಮಾಧ್ಯಮಗಳಿಗೆ ನಾನಾಗಿಯೇ ಬಹಿರಂಗ ಪಡಿಸಿಲ್ಲ ಎಂದು ಕಾರಾಗೃಹದ ಡಿಐಜಿ ಡಿ.ರೂಪಾ ತಿಳಿಸಿದ್ದಾರೆ.
ಶುಕ್ರವಾರ ಕಾರಾಗೃಹದ ಭ್ರಷ್ಟಾಚಾರದ ಕುರಿತು ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡಲಾಗಿದೆ ಎಂಬ ಆರೋಪದಲ್ಲಿ ಡಿಐಜಿ ಡಿ.ರೂಪಾರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದಕ್ಕೆ ಸಮಜಾಯಿಷಿ ನೀಡಿರುವ ಅವರು, ನಾನಾಗಿಯೇ ಮಾಧ್ಯಮಗಳ ಮುಂದೆ ಹೋಗಿಲ್ಲ. ಅವರು ಕೇಳಿದ ಕೆಲವೊಂದು ಪ್ರಶ್ನೆಗೆ ಉತ್ತರಿಸಿದ್ದೇನೆಂದು ತಿಳಿಸಿದರು.
ಕಾರಾಗೃಹದ ಖೈದಿಗಳ ಮೇಲೆ ಯಾವುದೇ ವೈರತ್ವವಿಲ್ಲ. ಕಾರಾಗೃಹದ ಒಳಿತಿಗಾಗಿ ಕೆಲವೊಂದು ಅಂಶಗಳನ್ನು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ. ಭ್ರಷ್ಟಾಚಾರದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂದು ಅವರು ಸಮರ್ಥಿಸಿಕೊಂಡರು.