ಅಡಕತ್ತರಿ ಮತ್ತು ಸನ್ನೆ

Update: 2017-07-16 07:17 GMT

ಮಲೆನಾಡಿನ ಮತ್ತು ಬಯಲು ಸೀಮೆಯ ಜನರು ವೀಳ್ಯೆದೆಲೆ ಅಡಿಕೆ ಬಾಯಲ್ಲಿ ಹಾಕಿ ಅಗಿಯುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಅವರು ಕಠಿಣವಾದ ಇಡಿಯಾದ ಅಡಿಕೆಯನ್ನು ತುಂಡು ಮಾಡಲು ಅಡಕತ್ತರಿಯನ್ನು (ಚಿತ್ರ-1) ಸಾಮಾನ್ಯವಾಗಿ ಬಳಸುತ್ತಾರೆ. ಎಡಗೈಯಲ್ಲಿ ಅಡಿಕೆ ಹಿಡಿದರೆ ಬಲಗೈ ಯಲ್ಲಿ ಅಡಕತ್ತರಿಯಿಂದ ಅದನ್ನು ಕತ್ತರಿಸುತ್ತಾರೆ. ಸಾಮಾನ್ಯರು ಅದನ್ನು ಗಮನಿಸಿದರೆ, ಅದರ ಉಪಯೋಗವನ್ನು ಕಾಣುತ್ತಾರೆ. ಆದರೆ ವಿಜ್ಞಾನದ ದೃಷ್ಟಿಯಿಂದ ಅಡಕತ್ತರಿ ಒಂದು ಯಾಂತ್ರಿಕ ಸಾಧನ. ಅಂದರೆ ಅದರ ಮೂಲ ಉದ್ದೇಶ ಮನುಷ್ಯನ ಸಾಮರ್ಥ್ಯ ಹೆಚ್ಚಿಸುವುದು. ಬರಿಗೈಯಲ್ಲಿ ಗಟ್ಟಿಯಾದ (ಬೇಯಿಸಿ, ಒಣಗಿಸಿದ) ಅಡಿಕೆಯನ್ನು ತುಂಡು ಮಾಡುವುದು ಕಷ್ಟದ ಕೆಲಸ. ಇದಲ್ಲದೇ ಹಲವು ಕಷ್ಟ ಸಾಧ್ಯವಾದ ಕಾರ್ಯಗಳನ್ನು ಮಾಡಲು ಮನುಷ್ಯ ಆಕಸ್ಮಿಕವಾಗಿಯೋ ಅಥವಾ ಪ್ರಯತ್ನ ಮಾಡಿಯೋ ಹೊಸ ರೀತಿಗಳನ್ನು ಕಂಡು ಹಿಡಿಯುತ್ತಾ ಬಂದಿದ್ದಾನೆ. ಇವುಗಳಲ್ಲಿ ಪ್ರಮುಖವಾದದು ಸನ್ನೆ ಅಥವಾ Lever.

                                                                                             (ಚಿತ್ರ-1)

ವಿಜ್ಞಾನಕ್ಕೆ ಅಪೂರ್ವವಾದ ಆವಿಷ್ಕಾರಗಳನ್ನು ನೀಡಿದ ಆರ್ಕಿ ಮಿಡೀಸ್ ಮೊತ್ತಮೊದಲ ಬಾರಿಗೆ ಸನ್ನೆ, Leverನ ತತ್ವವನ್ನು ವಿಶ್ವಕ್ಕೆಪರಿಚಯಿಸಿದರು. ಈ ತತ್ವದ ಪ್ರಕಾರ ಕಡಿಮೆ ಭಾರದ ವಸ್ತುವಿನ ಸಹಾಯದಿಂದ ಸ್ವಲ್ಪವೇ ದೂರದಲ್ಲಿರುವ ಹೆಚ್ಚು ಭಾರದ ವಸ್ತು ವನ್ನು, ಒಂದು ಗೂಟದ ಸಹಾಯದಿಂದ ಎತ್ತಬಹುದು. ಇದರಿಂದಾಗಿ ಹೆಚ್ಚು ಶ್ರಮದ ಕಾರ್ಯಗಳನ್ನೆಸಗಲು ಸ್ವಲ್ಪವೇ ಬಲ ಅಥವಾ ಶಕ್ತಿಯು ಬೇಕಾಗುತ್ತದೆ. ಇದು ಭಾರದ ಕಲ್ಲುಗಳನ್ನೆತ್ತಲು, ಹಾರೆಯನ್ನು ಮತ್ತು ಸಣ್ಣ ಕಲ್ಲುಗಳನ್ನು ಬಳಸುವುದನ್ನು ನೋಡಿದಾಗ ತತ್ವಶಃ ಅರ್ಥವಾಗು ತ್ತದೆ. ಹಾರೆಯನ್ನು ಸನ್ನೆಯಾಗಿ ಈ ಕಾರ್ಯದಲ್ಲಿ ಬಳಸಲಾಗುತ್ತದೆ.

ಯಾವುದೇ ಸನ್ನೆಯ ಅಳವಡಿಕೆಯಲ್ಲಿ, ನಾಲ್ಕು ಪ್ರಮುಖ ಅಂಶ ಅಥವಾ ಪ್ರಮಾಣಗಳಿರುತ್ತವೆ. ಇದನ್ನು ಈ ಕೆಳಗಿನ ಸಮೀಕರಣದ ಮೂಲಕ (ಚಿತ್ರ-2) ಅರಿಯಬಹುದು.

                                                                  (ಚಿತ್ರ-2)

M1 X a = M2 X b

ಚಿತ್ರ-3ರಲ್ಲಿ ಕಾಣುವಂತೆ, ಸನ್ನೆಯ ಪ್ರಮುಖ ಭಾಗಗಳು

ಉದ್ದದ ಸರಳು(rod)

ಊರಲು ಸಹಕರಿಸುವ ಗೂಟ sulcrum

ಬಳಸಿದ ಬಲ ಅಥವಾ ಸಾಮರ್ಥ್ಯ essort

ಒದಗಿದ ಬಲ ಅಥವಾ ಸಾಮರ್ಥ್ಯ (load)

                                                                            (ಚಿತ್ರ-3)

ಗೂಟ ಗಟ್ಟಿಯಾಗಿದ್ದಷ್ಟು ಹೆಚ್ಚು ಭಾರವನ್ನು ಅತೀ ಕಡಿಮೆ ಶ್ರಮದಿಂದ ಎತ್ತಬಹುದು. ಅಲ್ಲದೇ ಹಿಡಿಯುವ ಹಿಡಿಕೆ ಉದ್ದವಾ ಗಿದ್ದಷ್ಟೂ, ಬಲ ಕಡಿಮೆ ಬೇಕಾಗುತ್ತದೆ. ಈಗ ನಿಮ್ಮ ಸುತ್ತಮುತ್ತ ಕಾಣುವ ಸನ್ನೆಯ ಬಳಕೆಗಳನ್ನು ಗಮನಿಸಿ. ಉದಾ: ಕತ್ತರಿ, ಕಸ ತುಂಬುವ ಗಾಡಿ ಅಡಕತ್ತರಿ.

ಡಬ್ಬದ ಮುಚ್ಚಳ ತೆಗೆಯಲು ಬಳಸುವ ಸರಳು, ಬೀಗ, ಚಿಮಟ ಇವು ಸನ್ನೆಯ ಕೆಲ ಬಳಕೆಗಳು.

ಸನ್ನೆಗಳಲ್ಲಿ ಮೂರು ಬಗೆಗಳಿವೆ.

(seesaw)ಈ ಬಗೆಗಳನ್ನು ವರ್ಗ-1, ವರ್ಗ-2 ಮತ್ತು ವರ್ಗ-3 ಎಂದು ಗುರುತಿಸುತ್ತಾರೆ. ಮೊದಲನೆ ವರ್ಗಕ್ಕೆ ಸೇರಿದ ಸನ್ನೆ ಅಥವಾ ಸನ್ನೆಯ ಬಳಕೆಗಳಲ್ಲಿ, ಗೂಟ ನಡುವೆಯಿರುತ್ತದೆ. ಆಡುಮಣೆ ಇದಕ್ಕೊಂದು ಉದಾಹರಣೆ ಬೀಗ ಮತ್ತು ಅಡಕತ್ತರಿಗಳು ಮೊದಲನೆ ವರ್ಗಕ್ಕೆ ಸೇರಿವೆ.

ಎರಡನೆ ವರ್ಗಕ್ಕೆ ಸೇರಿದ ಸನ್ನೆಗಳಲ್ಲಿ, ಎತ್ತುವ ಭಾರ ನಡುವೆ ಯಿದ್ದು, ಗೂಟ ತುದಿಯಲ್ಲಿರುತ್ತದೆ. ಕಸವನ್ನೆತ್ತುವ ಕೈಗಾಡಿ ಈ ವರ್ಗಕ್ಕೆ ಸೇರಿದೆ. ಈ ಮೇಲೆ ಕೇಳಿದ ಎರಡೂ ವರ್ಗಗಳಲ್ಲಿ, ಬಳ ಸಿದ ಬಲ ಮತ್ತು ಒದಗಿದ ಬಲ ಬೇರೆ ಬೇರೆ ದಿಕ್ಕುಗಳಲ್ಲಿರುತ್ತದೆ.

(Stapler), ಮೂರನೆ ವರ್ಗಕ್ಕೆ ಸೇರಿದ ಸನ್ನೆಗಳಲ್ಲಿ ಈ ಎರಡೂ ಬಲಗಳು ಒಂದೇ ದಿಕ್ಕಿನಲ್ಲಿದ್ದು, ಗೂಟ ತುದಿಯಲ್ಲಿರುತ್ತದೆ. ಪಿನ್ ಮಾಡಲು ಬಳಸುವ ಸ್ಟೇಪ್ಲರ್ ಇಲಿಬೋನು, ಕಸಪೊರಕೆ ಇದಕ್ಕೆ ಉದಾಹರಣೆ.

ಚಿತ್ರ-4ರಲ್ಲಿ ಮೂರು ವರ್ಗದ ಸನ್ನೆಗಳನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ.

ಸನ್ನೆಯ ಬಗೆಗಳನ್ನಾಗಲಿ, ಸನ್ನೆಯ ಬಳಕೆಗಳನ್ನು ಗಮನಿಸುತ್ತಾ

ಹೋದರೆ, ಸರ್ವಮ್ ಸನ್ನೆಮಯಮ್ ಎಂದು ಹೇಳಬಹುದು. ವಿಜ್ಞಾನದ ದೃಷ್ಟಿಯಿಂದ, ಸನ್ನೆಯಿಲ್ಲದ ಯಂತ್ರಗಳಿಲ್ಲ. ಮಣ್ಣನ್ನೆತ್ತುವ ಯಂತ್ರಗಳೂ ಸನ್ನೆಗಳೇ ಮತ್ತು ಆಡುವ ಗಿಲಿಕಿಯೂ ಸನ್ನೆಯೇ. ಈ ರೀತಿಯ ವ್ಯಾಪಕ ಬಳಕೆಯನ್ನು ಅರಿತೇ, ಅರ್ಕಿಮಿಡೀಸ್‌ನ ಆವಿಷ್ಕಾರವನ್ನು ಗಮನಿಸಿದ ಪಾಪ್ಪುಸ್ ಹೀಗೆ ಹೇಳುತ್ತಾರೆ.

ನಿಲ್ಲಲು ನೆಲೆ ನೀಡಿ, ಸರಿಯಾದ ಸರಳೊಂದಿದ್ದರೆ ನಾನು ಭೂಮಿ ಯನ್ನೇ ಎತ್ತಬಲ್ಲೆ. ಇದು ಆ ಸಮಯದಲ್ಲಿ ಉತ್ಪ್ರೇಕ್ಷೆಯಾಗಿತ್ತೇನೊ ಆದರೆ ಈಗಂತೂ ಖಂಡಿತಾ ಅಲ್ಲ.

ಮುಂಚೆ ಉದಾಹರಿಸಿದ ಅಡಕತ್ತರಿ ಈಗ ಮೂಲೆ ಗುಂಪಾಗಿರ ಬಹುದು. ಆದರೆ ಸನ್ನೆಯ ಹೊಸ ಹೊಸ ಬಳಕೆಗಳು ದಿನ ಕಳೆದಂತೆ ಹೆಚ್ಚಾಗುತ್ತಲೇ ಬಂದಿವೆ. ಹೀಗಾಗಿ ಸಾಸಿವೆಯಿಲ್ಲದ ಮನೆಯಿಲ್ಲದಿ ರುವಂತೆ, ಸನ್ನೆಯಿಲ್ಲದ ಯಾಂತ್ರಿಕತೆಯಿಲ್ಲ ಎಂಬುದು ಅಕ್ಷರಶಃ ಸತ್ಯ.

Writer - ಪ್ರಭಾವತಿ.ಪಿ

contributor

Editor - ಪ್ರಭಾವತಿ.ಪಿ

contributor

Similar News