×
Ad

ಸಂವಿಧಾನ ರಕ್ಷಣೆಗೆ ಸ್ವಾತಂತ್ರ ಚಳವಳಿಯ ಮಾದರಿಯಲ್ಲಿ ಆಂದೋಲನ ಅನಿವಾರ್ಯ

Update: 2017-07-16 22:16 IST

ಬೆಂಗಳೂರು, ಜು. 15: ದೇಶದಲ್ಲಿ ಹಿಂದುತ್ವ ಮತ್ತು ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಸ್ವಾತಂತ್ರ ಚಳವಳಿಯ ಮಾದರಿಯಲ್ಲಿ ಕ್ರಾಂತಿಕಾರಿ ಜನಾಂದೋಲನ ರೂಪಿಸುವುದು ಅನಿವಾರ್ಯ ಎಂದು ಕಾನೂನು ತಜ್ಞ ಪ್ರೊ.ಬಾಬು ಮ್ಯಾಥ್ಯೂ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಹಲವು ಜನಪರ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಮನುಷ್ಯತ್ವ ಮತ್ತು ಸಂವಿಧಾನ ಉಳಿಸಿ’ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದುತ್ವ ಮತ್ತು ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ದಲಿತ ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಸ್ವಾತಂತ್ರ ಬಂದು 70 ವರ್ಷಗಳೆ ಕಳೆದರೂ ತಳ ಸಮುದಾಯಗಳಿಗೆ ರಕ್ಷಣೆ ಇಲ್ಲದಂತ್ತಾಗಿದೆ. ಇಂತಹ ದೌರ್ಜನ್ಯ ಮತ್ತು ಹಲ್ಲೆಗಳ ವಿರುದ್ಧ ಇನ್ನೂ ಮುಂದೆ ಸುಮ್ಮನೆ ಕೂರವುದು ಅಪರಾಧ ಎಂದು ಹೇಳಿದರು.

ಒಗ್ಗಟ್ಟಿನಿಂದ ಶ್ರಮಪಟ್ಟರೆ ಯಾವುದು ಕಷ್ಟವಾಗುವುದಿಲ್ಲ.ಪ್ರಗತಿ ಪರ ಚಿಂತಕರು ಸೇರಿದಂತೆ ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು, ಸಂಘಟಿತ ವಲಯದ ಕಾರ್ಮಿಕರು, ತಳ ಸಮುದಾಯ ಪ್ರಾತಿನಿಧ್ಯ ಸಂಘಟನೆಗಳನ್ನು ಒಂದುಗೂಡಿಸಿ ಸ್ವಾತಂತ್ರ ಚಳವಳಿಯ ಮಾದರಿಯಲ್ಲಿ ಹೋರಾಟವನ್ನು ರೂಪಿಸಬೇಕು ಎಂದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಸಂಘಟನೆಗಳ ವಿರುದ್ಧ ಜನಾಂದೋಲನ ರೂಪಿಸುವ ಮೊದಲು ಸಾಮಾನ್ಯ ಜನರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಬೇಕು.ಕೋಮು ಗಲಭೆ ಮತ್ತು ಜಾತಿಯತೆಗೆ ಪ್ರೇರಣೆ ನೀಡುವ ಶಕ್ತಿಗಳ ವಿರುದ್ಧ ದೂರ ಇರುವಂತೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಮಹಿಳಾ ವಿಮೋಚನಾ ಸಂಘಟನೆಯ ಮುಖ್ಯಸ್ಥೆ, ಲೇಖಕಿ ಕೊಲಿನ್ ಕುಮಾರ್ ಮಾತನಾಡಿ, ಸಂವಿಧಾನ ಮತ್ತು ಮನುಷ್ಯತ್ವ ರಕ್ಷಣೆಗೆ ಬುದ್ಧಿಜೀವಗಳ ರೀತಿ ಭಾಷಣ ಯಾವುದೇ ಕಾರಣಕ್ಕೂ ಕೆಲಸಕ್ಕೆ ಬರುವುದಿಲ್ಲ.‘ ನನ್ನ ಹೆಸರಿನಲ್ಲಿ ಬೇಡ’ ಶಿರ್ಷಿಕೆಯಡಿ ನಡೆದ ಹೋರಾಟಕ್ಕೆ ಜನರಿಂದ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ಇದರ ಮುಂದುವರೆದ ಭಾಗವಾಗಿ ಸ್ವಇಚ್ಛೆಯಿಂದ ತಳ ಸಮುದಾಯದವರು ಸಂವಿಧಾನ ವಿರೋಧಿ ಸಮಘಟನೆಗಳ ವಿರುದ್ಧ ಧ್ವನಿಗೂಡಿಸಬೇಕು ಎಂದು ತಿಳಿಸಿದರು. ಮಾನವ ಹಕ್ಕುಗಳ ಹೋರಾಟಗಾರ ಮನೋಹರ್ ಎಲವರ್ತಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News