ಕಾರು ಢಿಕ್ಕಿ : ಮೂರು ವರ್ಷದ ಬಾಲಕ ಸಾವು
Update: 2017-07-17 17:36 IST
ಬೆಂಗಳೂರು, ಜು.17: ಕಾರು ಚಾಲಕನ ಅಚಾತುರ್ಯದಿಂದಾಗಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ವಿಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಜಯನಗರ ಕಾವೇರಿಲೇಔಟ್ ನಿವಾಸಿ ಮಹಂತೇಶ್ ಎಂಬುವರ ಪುತ್ರ ತರುಣ್‌ಕುಮಾರ್(3) ಮೃತಪಟ್ಟ ಬಾಲಕ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿನಾಯಕ ಲೇಔಟ್‌ನ ನಿವೇದಿತಾ ಶಾಲೆಯಲ್ಲಿ ಎಲ್ಕೆಜಿ ಓದುತ್ತಿದ್ದ ಈ ಬಾಲಕ ಮನೆ ಮುಂದೆ ಆಟವಾಡುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಆತನ ಮೇಲೆ ಹರಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ವಿಜಯನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.