ಪಿಎಚ್‌ಡಿ ಪ್ರದಾನ
ಬೆಂಗಳೂರು, ಜು.17: ಬೆಂಗಳೂರು ವಿಶ್ವವಿದ್ಯಾಲಯದ ಕೆನರಾಬ್ಯಾಂಕ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಾದ ಎಸ್.ರಾಜೇಶ್, ಎನ್.ಇ.ಪ್ರದೀಪ್ ಹಾಗೂ ಶಿವರಂಜನಿ ಮೋಕ್ಷಗುಂಡಂ ಅವರಿಗೆ ಪಿಎಚ್‌ಡಿ ಪದವಿ ಪ್ರದಾನಿಸಲಾಗಿದೆ.
ಎಸ್.ರಾಜೇಶ್ ಮಂಡಿಸಿದ ಎ ಕಂಪಾರೇಟಿವ್ ಸ್ಟಡಿ ಆ್ ಸಿಕ್ಸ್ ಸಿಗ್ಮ ಇನ್ ಹ್ಯೂಮನ್ ರಿಸೋರ್ಸ್ ಮ್ಯಾನೇಜ್‌ಮೆಂಟ್ ಪ್ರಾಕ್ಟೀಸಿಂಗ್ ಅಂಡ್ ನಾನ್-ಪ್ರಾಕ್ಟೀಸಿಂಗ್ ಐ.ಟಿ. ಕಂಪನೀಸ್ ಎಂಬ ಸಂಶೋಧನಾ ಪ್ರಬಂಧಕ್ಕೆ ವಿವಿ ಪಿಎಚ್‌ಡಿ ಪದವಿ ನೀಡಿದೆ.
ಪ್ರದೀಪ್ ಮಂಡಿಸಿದ ಬಸವ ಫಿಲಾಸಫಿ ಅಂಡ್ ಇಟ್ಸ್ ರಿಲವೆನ್ಸ್ ಟು ಮ್ಯಾನೇಜ್‌ಮೆಂಟ್- ಎ ಸ್ಟಡಿ ವಿಥ್ ಸ್ಪೆಷಲ್ ರೆಫರೆನ್ಸ್ ಟು ಹ್ಯೂಮನ್ ರಿಸೋರ್ಸ್ ಎಂಬ ಸಂಶೋಧನಾ ಪ್ರಬಂಧಕ್ಕೆ ಪಿಎಚ್‌ಡಿ ಪದ ನೀಡಿದೆ. ಶಿವರಂಜನಿ ಮೋಕ್ಷಗುಂಡಂ ಮಂಡಿಸಿದ ಬೆಂಗಳೂರಿನಲ್ಲಿರುವ ಭಾರತೀಯ ಮತ್ತು ಅಮೆರಿಕನ್ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಸಂಬಂಧಿಸಿದಂತೆ ಉತ್ತಾರಾಧಿಕಾರ ಯೋಜನೆಗಳ ಒಂದು ತುಲನಾತ್ಮಕ ಅಧ್ಯಯನ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ.