×
Ad

ಸಮವಸ್ತ್ರ ಇಲ್ಲದೆ, ಶಶಿಕಲಾ ನಡೆದಾಟ?

Update: 2017-07-18 18:26 IST

ಬೆಂಗಳೂರು, ಜು.18: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತೆ ಶಶಿಕಲಾ ಜೈಲಿನ ಸಮವಸ್ತ್ರ ಧರಿಸದೆ ತಮ್ಮ ಕೊಠಡಿ ಮುಂದೆ ನಡೆದಾಡುತ್ತಿರುವ ದೃಶ್ಯಗಳು ಸಿಸಿಟಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

ಶಶಿಕಲಾ ಅವರ ಅತ್ತಿಗೆ ಇಳವರಸಿಗೂ ಇದೇ ಸೌಲಭ್ಯಗಳನ್ನು ನೀಡಲಾಗಿದೆ ಎನ್ನಲಾಗಿದ್ದು, ಈ ಇಬ್ಬರು ಸಮವಸ್ತ್ರ ಧರಿಸದೆ, ಜೈಲಿನ ಬ್ಯಾರಕ್‌ನೊಳಗೆ ಇರದೆ, ಹೊರಗೆ ಓಡಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಸೌಲಭ್ಯ ಹಿಂದಕ್ಕೆ: ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರ ನೇತೃತ್ವದ ತಂಡ ಯಾವುದೇ ಸಂದರ್ಭದಲ್ಲೂ ಜೈಲಿಗೆ ಭೇಟಿ ನೀಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಶಶಿಕಲಾಗೆ ನೀಡಲಾಗುತ್ತಿದ್ದ ಪ್ರತ್ಯೇಕ ಐದು ಕೊಠಡಿಗಳು ಸೇರಿ ಇತರೆ ಸೌಲಭ್ಯಗಳನ್ನು ಸೋಮವಾರ ಮಧ್ಯರಾತ್ರಿಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News