×
Ad

​ಐಎಎಸ್ ಅಧಿಕಾರಿ ಮನೆಯಲ್ಲಿ ಕಳವು

Update: 2017-07-18 18:36 IST

ಬೆಂಗಳೂರು, ಜು.18: ಐಎಎಸ್ ಅಧಿಕಾರಿಯೊಬ್ಬರ ಮನೆಯ ಬೀಗ ಮುರಿದು ಒಳನುಗ್ಗಿ ಕಳವು ಮಾಡಿರುವ ಘಟನೆ ಇಲ್ಲಿನ ಸಂಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಎಚ್‌ಐಜಿ ಕಾಲನಿ, 12ನೆ ಕ್ರಾಸ್‌ನ 14ನೆ ಮುಖ್ಯರಸ್ತೆಯಲ್ಲಿ ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಅವರ ಮನೆಯ ಬೀಗ ಮುರಿದು ಕಳವು ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ರವಿವಾರ ಕುಟುಂಬಸ್ಥರು ಚೆನ್ನೈ ನಗರಕ್ಕೆ ತೆರಳಿದ ವೇಳೆ ದುಷ್ಕರ್ಮಿಗಳು ಮನೆಯ ಬೀಗ  ಮುರಿದು ಒಳನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸೋಮವಾರ ಐಎಎಸ್ ಅಧಿಕಾರಿ ಕಾರಿನ ಚಾಲಕ ಮನೆ ಬಳಿ ಬಂದಾಗ ಬಾಗಿಲು ಬೀಗ ಮೀಟಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News