ಕೆರೆಗಳ ಡಿ-ನೊಟಿಫೈಗೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ವಿರೋಧ
Update: 2017-07-18 19:08 IST
ಬೆಂಗಳೂರು, ಜು. 18: ಕೆರೆ, ಕುಂಟೆ, ಹಳ್ಳಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಡಿ ನೋಟಿಫಿಕೇಷನ್ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಎಚ್.ಕೆ.ಪಾಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪಾಟೀಲ್, ಕೆರೆ, ಕುಂಟೆ ಹಾಗೂ ಹಳ್ಳಗಳು ಜಲಮೂಲಗಳಾಗಿದ್ದು, ಅವುಗಳನ್ನು ಆ ಉದ್ದೇಶಕ್ಕಷ್ಟೆ ಬಳಕೆ ಮಾಡಿಕೊಳ್ಳಬೇಕೆಂಬುದು ನಮ್ಮ ಅಭಿಮತ ಎಂದು ಇದೇ ವೇಳೆ ತಿಳಿಸಿದರು.
ಒಣಗಿ ಹೋಗಿರುವ ಕೆರೆ-ಕುಂಟೆಗಳನ್ನು ಅನ್ಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದು ಸೂಕ್ತವಲ್ಲ. ಕೆರೆಗಳ ಡಿ-ನೋಟಿಫೈಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಪಾಟೀಲ್ ಆಕ್ಷೇಪಿಸಿದರು.