ಎಚ್.ಎಸ್.ರೇವಣ್ಣ ಬಂಧೀಖಾನೆ ಡಿಐಜಿ
Update: 2017-07-18 20:29 IST
ಬೆಂಗಳೂರು, ಜು.18: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳು ಬೆಳಕಿಗೆ ಬಂದ ಬೆನ್ನಲ್ಲೇ ವರ್ಗಾವಣೆಗೊಂಡಿದ್ದ ಬಂಧೀಖಾನೆ ಡಿಐಜಿ ಡಿ.ರೂಪಾ ಅವರ ಸ್ಥಾನಕ್ಕೆ ಐಪಿಎಸ್ ಅಧಿಕಾರಿ ಎಚ್.ಎಸ್.ರೇವಣ್ಣ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಹಾಗೆಯೇ ಹೆಚ್ಚುವರಿಯಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾಗಿದ್ದ ಕೃಷ್ಣಕುಮಾರ್ ವರ್ಗಾವಣೆಯ ನಂತರ ಆ ಹುದ್ದೆಯನ್ನು ಅನಿತಾ ಅವರಿಗೆ ಪ್ರಭಾರ ವಹಿಸಲಾಗಿದ್ದು, ಈಗ ಆ ಹುದ್ದೆಯ ಕಾರ್ಯನಿರ್ವಹಣೆಯನ್ನೂ ಹೆಚ್ಚುವರಿಯಾಗಿ ಎಚ್.ಎಸ್.ರೇವಣ್ಣರಿಗೇ ವಹಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.