×
Ad

ಒಂದು ವಾರದಲ್ಲಿ ಪರಿಹಾರ ಹುಡುಕಲಾಗುವುದು: ಹೈಕೋರ್ಟ್ ಗೆ ಸರಕಾರದ ಸ್ಪಷ್ಟನೆ

Update: 2017-07-18 20:38 IST

ಬೆಂಗಳೂರು, ಜು.18: ಗ್ರಾಮ ಪಂಚಾಯತಿಗಳಿಗೆ ಹೈಕೋರ್ಟ್‌ನಿಂದ ಜಾರಿಯಾಗುತ್ತಿರುವ ನೋಟಿಸ್ ತಲುಪುವಲ್ಲಿ ಆಗುತ್ತಿರುವ ವಿಳಂಬಕ್ಕೆ ಮತ್ತು ಸಂವಹನ ಕೊರತೆಗೆ ಒಂದು ವಾರದಲ್ಲಿ ಪರಿಹಾರ ಹುಡುಕುವುದಾಗಿ ಹೈಕೋರ್ಟ್‌ಗೆ ಸರಕಾರ ತಿಳಿಸಿದೆ.

ಈ ಸಂಬಂಧ ವಿ.ಗೋವಿಂದಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನಿತ್ ಕೋಠಾರಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
           
ಅರ್ಜಿದಾರರ ಪರ ವಾದಿಸಿದ ವಕೀಲ ಎಸ್.ಡಿ.ಎನ್.ಪ್ರಸಾದ್ ಅವರು, ಗ್ರಾಮ ಪಂಚಾಯತಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದಾಗ ತಲುಪುವುದು ವಿಳಂಬವಾಗುತ್ತಿದೆ. ಹಾಗೂ ಸಂವಹನದ ಕೊರತೆ ಕೂಡ ಕಂಡು ಬರುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ಸರಕಾರದ ಪರ ವಾದಿಸಿದ ಪೊನ್ನಣ್ಣ ಅವರು, ಗ್ರಾಪಂಗಳಿಗೆ ಹೈಕೋರ್ಟ್‌ನಿಂದ ಜಾರಿಯಾಗುತ್ತಿರುವ ನೋಟಿಸ್ ತಲುಪಲು ವಿಳಂಬ ಮತ್ತು ಸಂವಹನ ಕೊರತೆಗೆ ಒಂದು ವಾರದಲ್ಲಿ ಪರಿಹಾರ ಹುಡುಕುವುದಾಗಿ ಪೀಠಕ್ಕೆ ತಿಳಿಸಿದರು. ಅಲ್ಲದೆ, ಹೈಕೋರ್ಟ್‌ಗೆ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಹಾಜರಾಗಿದ್ದರು.
ವಕೀಲರ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠವು ಒಂದು ವಾರದಲ್ಲಿ ಪರಿಹಾರ ಹುಡುಕಬೇಕೆಂದು ಆದೇಶಿಸಿ ಅರ್ಜಿಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News