​ವೃತ್ತಕ್ಕೆ ಪಾರ್ವತಮ್ಮ ಹೆಸರು ನಾಮಕರಣ

Update: 2017-07-18 15:14 GMT

ಬೆಂಗಳೂರು, ಜು.18: ಯಡಿಯೂರು ವಾರ್ಡ್‌ನ ಮಾಧವರಾವ್ ವೃತ್ತದಿಂದ ನಾಗಸಂದ್ರದವರೆಗಿನ ರಸ್ತೆಗೆ ಹಿರಿಯ ನಟಿ ಪಾರ್ವತಮ್ಮ ರಾಜ್‌ಕುಮಾರ್ ಹೆಸರು ನಾಮಕರಣ ಮಾಡಲು ಬಿಬಿಎಂಪಿ ಮುಂದಾಗಿದೆ.

ಸ್ಥಳೀಯ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್‌ರ ನಿರ್ಣಯಕ್ಕೆ ಪಾಲಿಕೆ ಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಇದೇ 21 ರಂದು ನಾಮಕರಣ ಮಾಡಲು ದಿನಾಂಕ ನಿಗದಿ ಮಾಡಲಾಗಿದೆ. ಡಾ.ರಾಜ್‌ಕುಮಾರ್ ಪುತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್, ಕೇಂದ್ರ ಸಚಿವ ಅನಂತ್‌ಕುಮಾರ್, ಮೇಯರ್ ಜಿ.ಪದ್ಮಾವತಿ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News