×
Ad

ವಿಧವೆಯರಿಗೆ ಪರಿಹಾರ ನೀಡುವ ವಿಚಾರ: ಆದೇಶ ಕಾಯ್ದಿರಿಸಿದ ಹೈಕೋರ್ಟ್

Update: 2017-07-18 21:22 IST

ಬೆಂಗಳೂರು, ಜು.18: ವಿಧವೆಯರಿಗೆ ಪರಿಹಾರ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಈ ಸಂಬಂಧ ಬಿ.ಆರ್.ಪುಷ್ಪಾ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಎಸ್.ಚವ್ಹಾಣ್ ಅವರಿದ್ದ ನ್ಯಾಯಪೀಠ ಆದೇಶವನ್ನು ಕಾಯ್ದಿರಿಸಿತು.
 

ಅರ್ಜಿದಾರರ ಪರ ವಾದಿಸಿದ ವಕೀಲರು, ವಿಧವೆಯರಿಗೆ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರಾದ ಬಿ.ಆರ್.ಪುಷ್ಪಾ ಸೇರಿದಂತೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಸರಕಾರ ಪರಿಹಾರ ನೀಡಬೇಕೆಂದು ಆದೇಶ ನೀಡಿದರು.

ಕ್ರೈಸ್ತ ಜನಾಂಗದಲ್ಲಿ ಪತಿ ಮೃತಪಟ್ಟರೆ ಮಹಿಳೆಯರು(ವಿಧವೆಯರು) ವಿದ್ಯಾಭ್ಯಾಸವನ್ನು ಮುಂದುವರೆಸುತ್ತಾರೆ. ಮುಸ್ಲಿಮ್ ಜನಾಂಗದ ಮಹಿಳೆಯರು ಮತ್ತೊಂದು ಮದುವೆಯಾಗುತ್ತಾರೆ. ಆದರೆ, ಹಿಂದೂ ಮಹಿಳೆಯರಿಗೆ ಗಂಡ ಮೃತನಾದರೆ ಜೀವನ ಸಾಗಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಸರಕಾರ ಅವರಿಗೆ ವಿಧವಾ ಪರಿಹಾರ ಹಣವನ್ನು ನೀಡಬೇಕೆಂದು ಆದೇಶಿಸಿತು. ಅಲ್ಲದೆ, ಆದೇಶವನ್ನು ಕಾಯ್ದಿರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News