ಭಾರತಕ್ಕೆ ಸಮೀರ್, ಪ್ರಣಯ್ ನೇತೃತ್ವ

Update: 2017-07-18 18:32 GMT

ನ್ಯೂಯಾರ್ಕ್, ಜು.18: ಯುಎಸ್ ಓಪನ್ ಗ್ರಾನ್‌ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯು ಬುಧವಾರ ಇಲ್ಲಿ ಆರಂಭವಾಗಲಿದ್ದು, ಸಮೀರ್ ವರ್ಮ ಹಾಗೂ ಪ್ರಣಯ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಈವರ್ಷ 2016ರ ಹಾಂಕಾಂಗ್ ಸೂಪರ್ ಸರಣಿಯ ಫೈನಲ್‌ಗೆ ತಲುಪಿದ್ದ ಸಮೀರ್ ಅವರು ಸೈಯದ್ ಮೋದಿ ಜಿಪಿ ಗೋಲ್ಡ್ ಟೂರ್ನಿಯನ್ನು ಜಯಿಸಿದ್ದರು. ಭುಜನೋವಿಗೆ ತುತ್ತಾಗಿದ್ದ ಸಮೀರ್ ಕಳೆೆದ ತಿಂಗಳು ನಡೆದಿದ್ದ ಇಂಡೋನೇಷ್ಯಾ ಹಾಗೂ ಆಸ್ಟ್ರೇಲಿಯ ಸೂಪರ್ ಸರಣಿಯಿಂದ ಹೊರಗುಳಿದಿದ್ದರು.

ಮಾಜಿ ನ್ಯಾಶನಲ್ ಚಾಂಪಿಯನ್ ಸಮೀರ್ ಸರಿಯಾದ ಸಮಯಕ್ಕೆ ವೀಸಾ ಲಭಿಸದ ಹಿನ್ನೆಲೆಯಲ್ಲಿ ಕಳೆದ ವಾರ ನಡೆದ ಕೆನಡಾ ಓಪನ್‌ನಿಂದ ಹಿಂದೆ ಸರಿದಿದ್ದರು. 22ರ ಹರೆಯದ ಸಮೀರ್ ವಿಯೆಟ್ನಾಂನ ಹೊಯಾಂಗ್ ನ್ಯಾಮ್ ಗುಯೆನ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದಾರೆ. ಎಚ್.ಎಸ್. ಪ್ರಣಯ್ ಹಾಗೂ ಪಿ.ಕಶ್ಯಪ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಕಶ್ಯಪ್ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕೊರಿಯಾ ಆಟಗಾರ ಲೀ ಹ್ಯೂನ್‌ರನ್ನು ಎದುರಿಸಲಿದ್ದಾರೆ. ದ್ವಿತೀಯ ಶ್ರೇಯಾಂಕದ ಪ್ರಣಯ್ ಆಸ್ಟ್ರೀಯದ ಲುಕಾ ವ್ರಾಬರ್‌ರನ್ನು ಎದುರಿಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಅನುಪಸ್ಥಿತಿಯಲ್ಲಿ ನ್ಯಾಶನಲ್ ಚಾಂಪಿಯನ್ ರುತುಪರ್ಣೊ ದಾಸ್ ಹಾಗೂ ಋತ್ವಿಕಾ ಶಿವಾನಿ ತಂಡದ ಸವಾಲನ್ನು ಮುನ್ನಡೆಸಲಿದ್ದಾರೆ. ಶಿವಾನಿ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಅಯಾ ಒಹೊರಿ, ರುತುಪರ್ಣೊ ಅವರು ರಾಚೆಲ್ ಹೊಡೆರಿಚ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News