×
Ad

ಐಟಿ-ಬಿಟಿ ಉದ್ಯೋಗಿಗಳ ಜೀವನ ಭದ್ರತೆಗೆ ಆಗ್ರಹ

Update: 2017-07-20 18:17 IST

ಬೆಂಗಳೂರು, ಜು.20: ಐಟಿ-ಬಿಟಿ ಉದ್ಯೋಗಿಗಳ ಜೀವನ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಆ.5ರಂದು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಬೃಹತ್ ಧರಣಿ ಹಮ್ಮಿಕೊಳ್ಳಲಾಗಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಪೂರ್ಣಚಂದ್ರ, ಅಖಿಲ ಭಾರತ ಐಟಿ-ಬಿಟಿ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ಸಮೂಹ ಮತ್ತು ಮಯೂರ ತಂಡದ ಸಹಕಾರದೊಂದಿಗೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮಹಿಳೆಯರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು. ರಾತ್ರಿ ಪಾಳಿ ಕೆಲಸಗಳಿಗೆ ಮಹಿಳೆಯರನ್ನು ನಿಯೋಜನೆ ಮಾಡಬಾರದು, ಬೆ.10 ರಿಂದ ಸಂಜೆ 6 ರವರೆಗೆ ಕೆಲಸದ ಸಮಯ ನಿಗದಿ ಮಾಡಬೇಕು. ರಾತ್ರಿ 8ರ ನಂತರ ಕೆಲಸ ಮಾಡುವವರಿಗೆ ಕ್ಯಾಬ್ ಸೇವೆ ನೀಡಬೇಕು. ಹೊಸ ಉದ್ಯೋಗಿಗಳಿಗೆ 6 ಲಕ್ಷ ವಾರ್ಷಿಕ ವೇತನ ನೀಡಬೇಕು.

ಹೊಸ ಉದ್ಯೋಗಿಗಳಿಗೆ ಶೈಕ್ಷಣಿಕ ಅಂಕಗಳನ್ನು ನೇಮಕಾತಿಯಲ್ಲಿ ಕಂಪೆನಿಗಳು ಪರಿಗಣಿಸಬಾರದು. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಹಾಗೂ ಶಿಶು ವೇತನ ಒದಗಿಸಬೇಕು, ಅನಧಿಕೃತವಾಗಿ ಉದ್ಯೋಗಿಗಳನ್ನು ವಜಾ ಮಾಡುವ ಕ್ರಮವನ್ನು ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News